ಮಂಗಳೂರು: ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದಿರುವ ಆರೋಪಕ್ಕೆ ಸಂಬಂಧಿಸಿ ಸಂತ್ರಸ್ತೆ ಎನ್ನಲಾದ ಮಹಿಳೆಯು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.
ತಾನು ದೂರು ನೀಡಿದಂತೆ ಕೇಸು ದಾಖಲಿಸಿಕೊಳ್ಳಲಿಲ್ಲ ಎಂದು ಪೊಲೀಸರ ವಿರುದ್ಧವೂ ದೂರಿನಲ್ಲಿ ಆರೋಪಿಸಲಾಗಿದೆ.
ಅರುಣ್ ಕುಮಾರ್ ಪುತ್ತಿಲ ಅತ್ಯಾಚಾರ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಸಂತ್ರಸ್ಥೆ ದೂರಿದ್ದಾಳೆ.
ದೂರು ನೀಡಲು ಬಂದಾಗ ದೂರು ಸ್ವೀಕರಿಸಲು ತಡಮಾಡಿದ ಪುತ್ತೂರು ನಗರ ಮತ್ತು ಮಹಿಳಾ ಪೋಲೀಸ್ ಠಾಣೆ ವಿರುದ್ಧವೂ ದೂರು ನೀಡಿದ್ದಾರೆ. ಅರುಣ್ ಪುತ್ತಿಲ ವಿರುದ್ಧ ದೂರು ನೀಡಲು ಮೂರು ದಿನಗಳ ಕಾಲ ಠಾಣೆಗೆ ಅಲೆದಿದ್ದೇನೆ. ಆದ್ರೆ ಪೋಲೀಸರು ದೂರು ಸ್ವೀಕರಿಸಿಲ್ಲ. ಸೆಪ್ಟೆಂಬರ್ 1 ರಂದು ಠಾಣೆಯ ಮುಂದೆ ಧರಣಿ ನಡೆಸಿದ ಬಳಿಕ ದೂರು ಸ್ವೀಕರಿಸಿದ್ದಾರೆ. ಆದ್ರೆ ಅತ್ಯಾಚಾರ ಪ್ರಕರಣ ದಾಖಲಿಸದೆ ಜಾಮೀನು ಮಂಜೂರಾಗುವ ಸೆಕ್ಷನ್ ಹಾಕಿದ್ದಾರೆ. ದೂರು ನೀಡಲು ಬಂದ ನನಗೆ ಬೆದರಿಕೆ ಕರೆಗಳೂ ಬರುತ್ತಿವೆ. ನನ್ನಂತೆ ಹಲವು ಮಹಿಳೆಯರಿಗೆ ಪುತ್ತಿಲರಿಂದ ಅನ್ಯಾಯವಾಗಿದೆ. ಆದ್ದರಿಂದ ನ್ಯಾಯಕೊಡಬೇಕೆಂದು ಸಂತ್ರಸ್ಥೆ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಿದ್ದಾರೆ.
ಇದೀಗ ಮಹಿಳೆಯು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿ ತನ್ನ ಮೇಲೆ ಅತ್ಯಾಚಾರ ಎಸಗಿರುವ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.