ಡಿಕೆ ಶಿವಕುಮಾರ್ ಗೆ ಮತ್ತೊಂದು ಸಂಕಷ್ಟ: ಮಕ್ಕಳ ಹಕ್ಕು ರಕ್ಷಣಾ ಆಯೋಗದಿಂದ ದೂರು ದಾಖಲು

Prasthutha|

ಬೆಂಗಳೂರು: ಮೇಕೆದಾಟು ಪಾದಯಾತ್ರೆಯಲ್ಲಿ ತೊಡಗಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.

- Advertisement -

ಡಿಜಿ- ಐಜಿಪಿ‌ ಪ್ರವೀಣ್ ಸೂದ್​ ಗೆ ಎನ್ ಸಿಪಿಸಿಆರ್ ಅಧ್ಯಕ್ಷರು ಪತ್ರ ಬರೆದಿದ್ದು, ಡಿಕೆ ಶಿವಕುಮಾರ್ ಕೋವಿಡ್ ನಿಯಮ ಪಾಲಿಸದೇ ಮಕ್ಕಳ ಜತೆ ಬೆರೆತಿದ್ದಾರೆ. ಶಾಲಾ ಮಕ್ಕಳ ಜತೆ ಕುಳಿತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಮಾಸ್ಕ್​ ಧರಿಸಿದೇ ಶಾಲಾಮಕ್ಕಳ ಜತೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಡಿಜಿ ಪ್ರವೀಣ್ ಸೂದ್ ​ಗೆ ಪತ್ರದಲ್ಲಿ ಹೇಳಿದೆ.



Join Whatsapp