ಇಸ್ಲಾಂ ಧರ್ಮದ ಅವಹೇಳನ: ರಾಧಾಕೃಷ್ಣ ಅಡ್ಯಂತಾಯನ ವಿರುದ್ಧ ಕ್ರಮಕ್ಕೆ ಉಳ್ಳಾಲ ಮುಸ್ಲಿಮ್ ಒಕ್ಕೂಟದಿಂದ ದೂರು ದಾಖಲು

Prasthutha|

ಮಂಗಳೂರು: ವಿಟ್ಲದ ಹಿಂದೂ ಸಮಾವೇಶದಲ್ಲಿ ಸಂಘಪರಿವಾರದ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಮತ್ತು ಇತರರು ಇಸ್ಲಾಮ್ ಧರ್ಮವನ್ನು ನಿಂದಿಸಿದ್ದು, ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಉಳ್ಳಾಲ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಇಸ್ಮಾಯಿಲ್ ಉಳ್ಳಾಲ ಆಗ್ರಹಿಸಿದ್ದಾರೆ.

- Advertisement -


ಜೂನ್ 6ರಂದು ವಿಟ್ಲ KSRTC ಬಸ್ ನಿಲ್ದಾಣದ ಬಳಿ ಹಿಂದೂ ಜಾಗೃತಿ ಸಭೆಯಲ್ಲಿ ರಾಧಾಕೃಷ್ಣ ಅಡ್ಯಂತಾಯ ಇಸ್ಲಾಂ ಧರ್ಮವನ್ನು ಅತ್ಯಂತ ನೀಚವಾಗಿ ನಿಂದಿಸಿ ಅವಹೇಳನ ಮಾಡಿದ್ದಾನೆ. ಅವಾಚ್ಯ ಶಬ್ಧಗಳನ್ನು ಬಳಸಿ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ತುಚ್ಚವಾಗಿ ಮಾತನಾಡಿದ್ದಾನೆ. ಇಂತಹ ಹೇಳಿಕೆ ಸಮಾಜಕ್ಕೆ ಅಶಾಂತಿ ಸೃಷ್ಟಿಸುವಲ್ಲಿ ಕಾರಣವಾಗಿದ್ದು ಇಸ್ಲಾಮಿನ ಆದರ್ಶ ಆಶಯ ಅರಿಯದ ಇಂತಹ ನೀಚ ಹೇಳಿಕೆಯನ್ನು ಮುಸ್ಲಿಮ್ ಒಕ್ಕೂಟ ಉಳ್ಳಾಲ(ರಿ) ತೀವ್ರವಾಗಿ ಖಂಡಿಸುತ್ತದೆ. ಈತನ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಮುಸ್ಲಿಮ್ ಒಕ್ಕೂಟ ಕೇಸು ದಾಖಲಿಸಿದೆ. ಆದ್ದರಿಂದ ಕೂಡಲೇ ಪ್ರಕರಣ ದಾಖಲಿಸಿ ಆತನ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕುಎ ಎಂದು ಇಸ್ಮಾಯಿಲ್ ಉಳ್ಳಾಲ ಪತ್ರಿಕಾ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Join Whatsapp