ಆಝಾನ್ ವಿರುದ್ಧ ಅಪಪ್ರಚಾರ ಮಾಡಿದ್ದ ಪ್ರಚೋದನಕಾರಿ ಭಾಷಣಗಾರ್ತಿ ವಿರುದ್ಧ ದೂರು ದಾಖಲು

Prasthutha|

ಬೆಳ್ತಂಗಡಿ: ಅಲ್ಲಾಹು ಅಕ್ಬರ್ ಎಂದರೆ ಹಿಂದೂಗಳನ್ನು ಕೊಲ್ಲಿ ಎಂದು ಸಮಾಜಕ್ಕೆ ತಪ್ಪು ಮಾಹಿತಿ ನೀಡಿ ಸಮುದಾಯಗಳ ನಡುವೆ ವೈಷಮ್ಯ ಮೂಡಿಸಲು ಪ್ರಯತ್ನಿಸಿದ ಆರೋಪದಲ್ಲಿ ಹಾರಿಕಾ ಮಂಜುನಾಥ್ ವಿರುದ್ಧ ದೂರು ನೀಡಲಾಗಿದೆ.

- Advertisement -

ಬೆಳ್ತಂಗಡಿಯಲ್ಲಿ ಸೋಮವಾರ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಕಿನ್ಯಮ್ಮ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗೀತಾ ಜಯಂತಿ ಸೌರ್ಯ ಪಥಸಂಚಲನ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹಾರಿಕಾ ಮಂಜುನಾಥ್ ಅವರು ಮುಸ್ಲಿಮರ ಆಝಾನ್ ( ಮಸೀದಿಯಲ್ಲಿ 5 ಬಾರಿ ಮೊಳಗುವ ಸಂದೇಶ) ಬಗ್ಗೆ ದುರುದ್ದೇಶಪೂರಿತವಾಗಿ ತಪ್ಪು ವ್ಯಾಖ್ಯಾನ ನೀಡಿದ್ದರು. ಇದರಿಂದ ಸಮಾಜಕ್ಕೆ ತಪ್ಪು ಮಾಹಿತಿ ರವಾನೆಯಾಗುತ್ತದೆ ಎಂದು ಪೆರಾಲ್ದರಕಟ್ಟೆ ಮಸೀದಿ ಸಮಿತಿಯಿಂದ ದೂರು ನೀಡಲಾಗಿತ್ತು

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News



Join Whatsapp