ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಯುವತಿಯಿಂದ ದೂರು ದಾಖಲು : ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ !

Prasthutha|

ಬೆಂಗಳೂರು : ಬಿಜೆಪಿಯ ಸಚಿವರಾಗಿದ್ದ ರಮೇಶ್ ಜಾರಕಿಹೊಳಿಯ ಸೆಕ್ಸ್ ಹಗರಣ ಇಂದು ಮಹತ್ವದ ತಿರುವು ಪಡೆದುಕೊಂಡಿದೆ. ರಮೇಶ್ ಜಾರಕಿಹೊಳಿ ಅವರದ್ದೆಂದು ಹೇಲಲಾದ ಲೈಂಗಿಕ ದೃಶ್ಯಗಳಿಲ್ಲದ್ದ ಯುವತಿಯು ಇಂದು ತನ್ನ ವಕೀಲ ಜಗದೀಶ್ ಗೌಡರ ಮೂಲಕ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಜಗದೀಶ್ ಗೌಡ ಮದ್ಯಾಹ್ನ 2.30ಕ್ಕೆ ಕಮಿಷನರ್ ಕಚೇರಿಗೆ ತೆರಳಿ ಯುವತಿಯ ಪರವಾಗಿ ದೂರು ಪ್ರತಿಯನ್ನು ಸಲ್ಲಿಸಿದ್ದಾರೆ.

- Advertisement -

ಯುವತಿ ಬರೆದಿರುವ ದೂರಿನಲ್ಲಿ, ಕಿರುಚಿತ್ರ ನಿರ್ಮಾಣಕ್ಕೆ ಸಹಾಯ ಕೋರಿ ನಾನು ರಮೇಶ್ ಜಾರಕಿಹೊಳಿ ಅವರನ್ನು ಸಂಪರ್ಕಿಸಿದ್ದೆ. ಅವರು ನನಗೆ ಸರ್ಕಾರಿ ಹುದ್ದೆ ನೀಡುವ ಆಮಿಷಗಳನ್ನೊಡ್ಡಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಮಾತ್ರವಲ್ಲ ವೀಡಿಯೋ ಕಾಲ್ ಕರೆ ಮಾಡಿ ಅಶ್ಲೀಲ ದೃಶ್ಯಗಳ ಮೂಲಕ ನನ್ನ ಮಾನ ಹರಾಜಾಗಿಸಿದ್ದಾರೆ. ಅವರೇ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ ಎಮ್ದು ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Join Whatsapp