ವರದಕ್ಷಿಣೆ ಪಡೆಯುವವರಿಗೆ, ನೀಡುವವರಿಗೆ ಯುಎಇ ಮೂಲದ ಈ ಕಂಪೆನಿಯಲ್ಲಿ ಇನ್ನು ಉದ್ಯೋಗವಿಲ್ಲ!

Prasthutha|

ಅಬುಧಾಬಿ : ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ಮೂಲದ ʼದ ಏರೀಸ್‌ ಗ್ರೂಪ್‌ʼ ಎಂಬ ಕಂಪೆನಿ ತನ್ನ ಸಂಸ್ಥೆಯಲ್ಲಿ ʼವರದಕ್ಷಿಣೆ ವಿರೋಧಿʼ ನೀತಿ ಘೋಷಿಸಿದೆ. ಕಾನೂನು ಬಾಹಿರವಾದ ವರದಕ್ಷಿಣೆ ಚಟುವಟಿಕೆಯಲ್ಲಿ ನಿರತರಾದವರನ್ನು ತನ್ನ ಸಂಸ್ಥೆಗೆ ಉದ್ಯೋಗಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಕಂಪೆನಿ ಘೋಷಿಸಿದೆ.

- Advertisement -

ಶಾರ್ಜಾ ಮೂಲದ ಏರಿಸ್‌ ಗ್ರೂಪ್‌ ನಲ್ಲಿ ವರದಕ್ಷಿಣೆ ಕೇಳುವವರಿಗೆ ಅಥವಾ ಕೊಡುವವರಿಗೆ ನೌಕರಿಯಿಲ್ಲ ಎಂದು ಕಂಪೆನಿ ಸಿಇಒ ಸುಹಾನ್‌ ರಾಯ್‌ ಹೇಳಿದ್ದಾರೆ.

ಕೇರಳ ಮೂಲದ ರಾಯ್‌ ಅವರ ಕಂಪೆನಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೇರಳದಲ್ಲಿ ಇತ್ತೀಚೆಗೆ ವರದಕ್ಷಿಣೆ ಕಿರುಕುಳ ಸಂಬಂಧಿ ಮೂರು ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆದಿರುವ ನಡುವೆ, ಇದೀಗ ರಾಯ್‌ ಅವರ ನಿರ್ಧಾರಕ್ಕೆ ಹೆಚ್ಚು ಮಹತ್ವ ಬಂದಿದೆ. ಮಾರ್ಚ್‌ ನಲ್ಲಿ ಮಹಿಳಾ ದಿನಾಚರಣೆಯ ವೇಳೆಯೇ ರಾಯ್‌ ಅವರು ಇದನ್ನು ಘೋಷಿಸಿದ್ದರು. ಆದರೆ, ಈ ವಾರ ಅದನ್ನು ಅಧಿಕೃತವಾಗಿ ಜಾರಿಗೆ ಮಾಡಿದ್ದಾರೆ.

- Advertisement -

ತನ್ನ ನೌಕರರಿಗೆ ಉದ್ಯೋಗ ಗುತ್ತಿಗೆಯಲ್ಲಿ ವರದಕ್ಷಿಣೆ ವಿರೋಧಿ ನೀತಿಯನ್ನು ಅಧಿಕೃತವಾಗಿ ಅಳವಡಿಸಿಕೊಂಡ ಜಗತ್ತಿನ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ʼದ ಏರೀಸ್‌ ಗ್ರೂಪ್‌ʼ ಪಾತ್ರವಾಗಿದೆ.  

Join Whatsapp