ನಿಮ್ಮ ಮೇಲೆ ನಂಬಿಕೆಯಿಂದ ಕಷ್ಟವಾದರೂ ಕಾರ್ಯ ಮುಂದುವರಿಸ್ತೇವೆ: ಆರೋಗ್ಯ ಸಚಿವರ ಬಳಿ ಸಮಸ್ಯೆ ಹೇಳಿಕೊಂಡ ಸಮುದಾಯ ಆರೋಗ್ಯಾಧಿಕಾರಿಗಳು

Prasthutha|

ಬೆಂಗಳೂರು : ರಾಜ್ಯದ ಹಳ್ಳಗಳಲ್ಲಿ ಆರೋಗ್ಯ ಸೇವೆ ಒದಗಿಸುವ ಸಮುದಾಯ ಆರೋಗ್ಯಾಧಿಕಾರಿಗಳು ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನ ಭೇಟಿ ಮಾಡಿ ಸಿ.ಎಚ್.ಒ ಗಳಲ್ಲಿನ ಸಮಸ್ಯೆಗಳನ್ನ ಹೇಳಿಕೊಂಡಿರು. ಪ್ರತಿಯೊಬ್ಬರ ಸಮಸ್ಯೆಗಳನ್ನ ಸಮಚಿತ್ತದಿಂದ ಆಲೀಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಿಎಚ್.ಒ ಗಳ ಸಮಸ್ಯೆ ಬಗೆಹರಿಸಲು ಪ್ರತ್ಯೇಕ ಸಭೆ ಕರೆಯುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.‌

- Advertisement -

ನಿರ್ಧಿಷ್ಟ ಉದ್ದೇಶಕ್ಕಾಗಿ ಆರಂಭವಾಗಿದ್ದ ಸಿ.ಎಚ್.ಒ ಗಳಲ್ಲಿ ಕಳೆದ ಎರಡು ವರ್ಷದಿಂದ ಉತ್ತಮ ಆರೋಗ್ಯ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಆರೋಗ್ಯಾಧಿಕಾರಿಗಳಿಗೆ ವೇತನ ಸರಿಯಾಗಿ ತಲುಪಿತ್ತಿಲ್ಲ. ಅಲದೇ ಹಿರಿಯ ಅಧಿಕಾರಿಗಳು ಸಿಎಚ್.ಒ ಗಳನ್ನ ಕಡೆಗಣಿಸುತ್ತಿದ್ದು, ಇದರಿಂದ ಸಾಕಷ್ಟು ಆರೋಗ್ಯಾಧಿಕಾರಿಗಳು ಸಂಕಷ್ಠದಲ್ಲಿದ್ದಾರೆ. ಸೌಲಭ್ಯ ಕೇಳಿದರೆ ಇಲಾಖೆ ಮಟ್ಟದ ಅಧಿಕಾರಿಗಳು ಸಮುದಾಯ ಆರೋಗ್ಯಾಧಿಕಾರಿಗಳಿಗೆ ಟರ್ಮಿನೇಟ್ ಮಾಡುವ ಭಯ ಹುಟ್ಟಿಸಿದ್ದಾರೆ. ಇದರಿಂದಾಗಿ ಹಲವು ಜಿಲ್ಲೆಗಳಲ್ಲಿ ಸಮುದಾಯ ಆರೋಗ್ಯಾಧಿಕಾರಿಗಳು ಕೆಲಸ ಬಿಟ್ಟು ಬೇರೆ ಕೆಲಸ ನೋಡಿಕೊಳ್ತಿದ್ದಾರೆ ಎಂದು ಸಿಎಚ್.ಒ ಗಳು ಆರೋಗ್ಯ ಸಚಿವರ ಮುಂದೆ ತಮ್ಮ ಸಮಸ್ಯೆ ಹೇಳಿಕೊಂಡರು.

ಬಹುತೇಕ ಸಿಎಚ್.ಒ ಗಳಲ್ಲಿ ಸಮುದಾಯ ಆರೋಗ್ಯಾಧಿಕಾರಿಗಳು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದರು. ಆದರೆ ತಾವು ಆರೋಗ್ಯ ಸಚಿವರಾದ ಹಿನ್ನೆಲೆಯಲ್ಲಿ ಹಲವರಲ್ಲಿ ಆಶಾ ಭಾವನೆ ಮೂಡಿದೆ. ನೀವು ಸಮಸ್ಯೆ ಸರಿ ಮಾಡ್ತೀರಾ ಎಂಬ ನಂಬಿಕೆಯಿದ್ದು, ಆರೋಗ್ಯ ಕಾರ್ಯದಲ್ಲಿ ನಾವೆಲ್ಲಾ ಮುಂದುವರಿಯಲು ನಿರ್ಧರಿಸಿದ್ದೇವೆ. ನೀವು ನಮ್ಮ ಸಮಸ್ಯೆಗಳನ್ನ ಬಗೆಹರಿಸಿಕೊಡಿ ಎಂದು ಆರೋಗ್ಯ ಸಚಿವ ಗುಂಡೂರಾವ್ ಅವರಿಗೆ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳ ಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

- Advertisement -

ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಂಬಂಧಪಟ್ಟ ಇಲಾಖೆಯ ಆರೋಗ್ಯಾಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಪರಿಹಾರ ಕಂಡುಳ್ಳೋಣ ಎಂದರು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳ ಗುತ್ತಿಗೆ ನೌಕರರ ಸಂಘದ ಕಾನೂನು ಸಲಹೆಗಾರರಾದ ಸಿ ಎಸ್ ದ್ವಾರಕನಾಥ್ ಹಾಗೂ ಸಂಘದ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.