ಬಾಂಗ್ಲಾದೇಶದಲ್ಲಿ ದುರ್ಗಾಪೂಜೆಯ ವೇಳೆ ಭುಗಿಲೆದ್ದ ಕೋಮು ಗಲಭೆ

Prasthutha|

ಡಾಕಾ : ಪೂಜೆಯ ವೇಳೆ ಕುರಾನ್ ವಿರುದ್ಧ ಯಾರೋ ಮಾತನಾಡಿದ್ದರ ಕಾರಣವಾಗಿ ಬಾಂಗ್ಲಾದೇಶದ ಹತ್ತಾರು ಕಡೆ ಕೋಮು ಗಲಭೆ ಭುಗಿಲೆದ್ದು ದುರ್ಗಾ ಪೆಂಡಾಲ್‌ಗಳನ್ನು ಉರುಳಿಸಲಾಗಿದೆ.ಚಾಂದ್ ಪುರ, ಚಿತ್ತಗಾಂಗ್, ಗಾಜಿಪುರ, ಮೌಲ್ವಿ ಬಜಾರ್, ಬಂದರ್ಬನ್,ನನುವಾರ್ ದಿಗಿ ಮೊದಲಾದ ಕಡೆ ಕೋಮು ಸೌಹಾರ್ದದಿಂದ ನಡೆಯುತ್ತಿದ್ದ ದುರ್ಗಾ ಪೂಜೆಗಳು ಈ ಬಾರಿ ಕೊನೆಯ ದಿನ ಗಲಾಟೆಯಲ್ಲಿ ಮುಗಿದವು.

- Advertisement -

ನೌಕಾಲಿಯಲ್ಲಿ ಇಸ್ಕಾನ್ ಮೇಲೆ ಒಂದು ಗುಂಪು ದಾಳಿ ಮಾಡಿದ್ದರಿಂದಾಗಿ ಜತನ್ ಕುಮಾರ್ ಎಂಬವರು ಸಾವಿಗೀಡಾಗಿ, ಇಬ್ಬರು ಗಾಯಗೊಂಡರು. ಮುನ್ಶಿಗಂಜ್ ರಶೂನಿಯಾ ಯೂನಿಯನ್‌ನ ದಾನಿಯಪುರ ಮಹಾಕಾಳಿ ಮಂದಿರದ ಆರು ಮೂರ್ತಿಗಳನ್ನು ಒಡೆಯಲಾಗಿದೆ. ಇಂದು ಮುಂಜಾವ ಮೂರೂವರೆ ಗಂಟೆಗಳ ಸುಮಾರಿಗೆ ಒಡೆದಿದ್ದಾರೆ ಎಂದು ಸಹಾಯಕ ಪೋಲೀಸು ಅಧೀಕ್ಷಕ ಎಂ. ಡಿ. ರಶೀದುಲ್ ಇಸ್ಲಾಂ ತಿಳಿಸಿದ್ದಾರೆ. ಈ ದೇವಾಲಯಕ್ಕೆ ಬೀಗ ಇಲ್ಲ. ಹಿಂದೆಂದೂ ಹೀಗಾಗಿರಲಿಲ್ಲ. ಈ ಬಾರಿ ಎಲ್ಲ ಮೂರ್ತಿ ಒಡೆದಿದ್ದಾರೆ ಎಂದು ಆಲಯ ಆಡಳಿತ ಮಂಡಳಿಯ ಶ್ರವತ ದೇವನಾಥ್ ತಿಳಿಸಿದ್ದಾರೆ.



Join Whatsapp