ದ.ಕ. ಜಿಲ್ಲೆಯಲ್ಲಿ ಮತೀಯ ಆಧಾರದಲ್ಲಿ ಹತ್ಯೆಗಳು ಖೇದಕರ: ಶಾಂತಿ ಕಾಪಾಡಲು ಕೆ.ಅಶ್ರಫ್ ಮನವಿ

Prasthutha|

ಮಂಗಳೂರು: ಸುಳ್ಯದ ರಾಜಕೀಯ ಪಕ್ಷದ ಮುಖಂಡ ಪ್ರವೀಣ್ ನನ್ನು ದುಷ್ಕರ್ಮಿಗಳು ಹತ್ಯೆ ನಡೆಸಿದ್ದು ಖಂಡನೀಯ. ಜಿಲ್ಲೆಯಲ್ಲಿ ಮತೀಯ ಆಧಾರದಲ್ಲಿ ಇತ್ತೀಚೆಗೆ ದುರ್ಘಟನೆಗಳು ಸಂಭವಿಸುತ್ತಿರುವುದು ಅತ್ಯಂತ ಖೇದಕರ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ತಿಳಿಸಿದ್ದಾರೆ.

- Advertisement -

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇಂತಹ ಬೆಳವಣಿಗೆಗಳಿಂದ ಜಿಲ್ಲೆಯ ಶಾಂತಿ ಸುವ್ಯವಸ್ಥೆಗೆ ತೀವ್ರ ಧಕ್ಕೆಯಾಗಲಿದೆ. ಸುಳ್ಯದಲ್ಲಿ ಇತ್ತೀಚೆಗೆ ಮಸೂದ್ ಎಂಬ ಯುವಕನು ಇಂತಹ ಕೃತ್ಯಕ್ಕೆ ಬಲಿಯಾಗಿದ್ದಾನೆ. ಮತೀಯ ದ್ವೇಷದಿಂದ ಎಂದಿಗೂ ಜನರ ಜೀವನ ಸುಗಮವಾಗಿ ನಡೆಯಲಾರದು. ಜಿಲ್ಲಾಡಳಿತ, ಪೊಲೀಸರು ಮತ್ತು ಸರಕಾರ ಮತೀಯ ದ್ವೇಷಿತ ಅಪರಾಧದ ಆರೋಪಿಗಳನ್ನು ಬಂಧಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಮತ್ತು ಜಿಲ್ಲೆಯಲ್ಲಿ ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಗುಪ್ತಚರ ಸಂಸ್ಥೆ ಗಳನ್ನು ಸಕ್ರಿಯ ಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸಾರ್ವಜನಿಕರು ಈ ಘಟನೆಯ ಬಗ್ಗೆ ಯಾವುದೇ ಊಹಾಪೋಹ, ವದಂತಿಗಳಿಗೆ ಕಿವಿಗೊಟ್ಟು ಗೊಂದಲ ಸೃಷ್ಟಿ ಮಾಡಬಾರದು. ಪೊಲೀಸರು ಈ ಕೃತ್ಯದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಕೃತ್ಯದ ಹಿಂದಿನ ಸತ್ಯಾಂಶವನ್ನು ಬಹಿರಂಗಪಡಿಸಬೇಕು. ಪೊಲೀಸರು ಈ ಘಟನೆಯಲ್ಲಿ ಸಮಗ್ರ ಕೂಲಂಕಷ ತನಿಖೆ ನಡೆಸುವ ಬಗ್ಗೆ ಭರವಸೆ ಹೊಂದಿದ್ದೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp