ಸೂರ್ಯ ನಮಸ್ಕಾರವನ್ನು ಕಾಲೇಜುಗಳಲ್ಲಿ ಕಡ್ಡಾಯಗೊಳಿಸುವ ಮತೀಯ ನಿರ್ಧಾರವನ್ನು ಶೀಘ್ರ ಹಿಂಪಡೆಯಬೇಕು: ಕ್ಯಾಂಪಸ್ ಫ್ರಂಟ್

Prasthutha|

ಬೆಂಗಳೂರು: ಪದವಿಪೂರ್ವ ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರವನ್ನು ಕಡ್ಡಾಯಗೊಳಿಸಿ ಸರಕಾರ ಹೊರಡಿಸಿರುವ ಆದೇಶವು ಖಂಡನೀಯವಾಗಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೆಸರಿನಲ್ಲಿ ತಮ್ಮ ಮತೀಯ ಅಜೆಂಡಾಗಳನ್ನು ಜಾರಿಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಈ ಆದೇಶವನ್ನು ಶೀಘ್ರ ಹಿಂಪಡೆಯಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ಆಗ್ರಹಿಸಿದೆ.

- Advertisement -

ಪದವಿ ಪೂರ್ವ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಆರ್. ಕುಸುಮಾ ಅವರು ಸುತ್ತೋಲೆ ಹೊರಡಿಸಿ, ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ 2022 ರ ಜ.1 ರಿಂದ ಫೆ.7 ರವರೆಗೆ ಸೂರ್ಯ ನಮಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ತಮ್ಮ‌ ಜಿಲ್ಲಾ‌‌ ವ್ಯಾಪ್ತಿಯಲ್ಲಿ ಬರುವ ಎಲ್ಲಾ‌ ಪದವಿ ಪೂರ್ವ ಕಾಲೇಜುಗಳ‌ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸುತ್ತೋಲೆಯಲ್ಲಿ‌ ಸೂಚನೆ ನೀಡಲಾಗಿದೆ.

ಶಾಲಾ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಬಹುದೊಡ್ಡದಿದೆ, ಆದರೆ ಅದನ್ನು ನಿವಾರಿಸಲು ಸರಕಾರಕ್ಕೆ ಆಸಕ್ತಿಯಿಲ್ಲ ಬದಲಾಗಿ ಸೂರ್ಯ ನಮಸ್ಕಾರದಂತಹ ಮತೀಯ ಅಜೆಂಡಾಗಳನ್ನು ಶೈಕ್ಷಣಿಕ ವಲಯದಲ್ಲಿ ಹೇರಲು ಮುಂದಾಗಿದ್ದು ಶಿಕ್ಷಣವನ್ನು ಕೇಸರೀಕರಣಗೊಳಿಸುವ ಹುನ್ನಾರವಾಗಿದೆಯೆಂದು ಇದನ್ನು ಸಂವಿಧಾನದ ಮೇಲೆ ಭರವಸೆಯಿಟ್ಟಿರುವ ಪ್ರತಿಯೊಬ್ಬರು ವಿರೋಧಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಥಾವುಲ್ಲ ಪುಂಜಾಲಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp