ಕಚ್: ವ್ಯಕ್ತಿಯೊಬ್ಬರ ಹತ್ಯೆಯ ಬಳಿಕ ಗುಜರಾತ್ ನ ಕಛ್ ಜಿಲ್ಲೆಯ ಭುಜ್ ಎಂಬಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದ್ದು, ದುಷ್ಕರ್ಮಿಗಳ ಗುಂಪೊಂದು ಮಸೀದಿಗೆ ದಾಳಿ ನಡೆಸಿ ದಾಂಧಲೆಗೈದು, ಕಿಟಕಿ ಗಾಜುಗಳನ್ನುಧ್ವಂಸಗೊಳಿಸಿದೆ.
ಭುಜ್ ಪ್ರದೇಶದ ಮಧಾಪುರ್ ಎಂಬಲ್ಲಿ ಹಲವು ಅಂಗಡಿಗಳಿಗೂ ದಾಳಿ ನಡೆಸಿರುವ ಗುಂಪು, ಅಲ್ಲಿಂದ ಲೂಟಿ ಮಾಡಿದೆ.
ಪ್ರಸಕ್ತ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಎರಡೂ ಗುಂಪುಗಳು ನೀಡಿದದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ.
ನಾಳೆ ಗುಜರಾತ್ ಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿರುವ ಸಂದರ್ಭದಲ್ಲೇ ಈ ಕೋಮು ಘರ್ಷಣೆ ನಡೆದಿರುವುದುಸರ್ಕಾರಕ್ಕೆ ಮುಜುಗರ ತರಿಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಪರೇಶ್ ರಾಬರಿ ಮತ್ತು ಸುಲೇಮಾನ್ ಸನಾ ಎಂಬವರ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದಿದೆ. ಈ ವೇಲೆ ಸುಲೈಮಾನ್ಚಾಕು ಇರಿದಿದ್ದು, ಇದರಿಂದ ಪರೇಶ್ ಮೃತಪಟ್ಟಿದ್ದಾರೆ. ಪರೇಶ್ ಅವರ ಅಂತ್ಯಸಂಸ್ಕಾರ ನಡೆಸಿ ಹಿಂದಿರುವಾಗ ಮುಸ್ಲಿಮರಮಸೀದಿ, ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ.
ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದಷ್ಟೇ ಹೇಳಬಲ್ಲೆ ಎಂದು ಕಚ್ ಪಶ್ಚಿಮ ವಲಯದ ಪೊಲೀಸ್ ವರಿಷ್ಠಾಧಿಕಾರಿಸೌರಬ್ ಸಿಂಗ್ ತಿಳಿಸಿದ್ದಾರೆ.