ಮದ್ರಸಾಕ್ಕೆ ನುಗ್ಗಿ ಪೂಜೆ ಸಲ್ಲಿಸಿದ ಸಂಘಪರಿವಾರದ ಕೃತ್ಯದ ಹಿಂದೆ ಕೋಮುವಾದಿ ಬಿಜೆಪಿ ಸರ್ಕಾರದ ಕುಮ್ಮಕ್ಕಿದೆ:  SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್

Prasthutha|

ಬೆಂಗಳೂರು: ದಸರಾ ಮೆರವಣಿಗೆ ಸಂದರ್ಭದಲ್ಲಿ ಬೀದರ್ ನಗರದ ಪರಂಪರಾಗತ ಮುಹಮ್ಮದ್ ಗವಾನ್ ಮದ್ರಸಾದ ಬೀಗ ಮುರಿದು, ಒಳನುಗ್ಗಿ, ಜೈ ಶ್ರೀ ರಾಮ್ ಘೋಷಣೆ ಕೂಗಿ ಪೂಜೆ ಮಾಡಿರುವುದು ಖಂಡನೀಯ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ)ದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ತಿಳಿಸಿದ್ದಾರೆ.

- Advertisement -

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಅದೊಂದು ಪುರಾತತ್ವ ಇಲಾಖೆ ಗುರುತಿಸಿರುವ ಪಾರಂಪರಿಕ ಕಟ್ಟಡ. 15ನೇ ಶತಮಾನದಷ್ಟು ಹಳೆಯ ಇತಿಹಾಸವಿರುವ ಐತಿಹಾಸಿಕ ಸ್ಮಾರಕ. ಅಲ್ಲಿ ಮದ್ರಸಾ ಕಾರ್ಯನಿರ್ವಹಿಸುತ್ತಿದೆ. ಅಂತಹ ಕಟ್ಟಡದ ಬೀಗ ಮುರಿದು ಒಳ ನುಗ್ಗುವಂತಹ ಗೂಂಡಾಗಿರಿ ಮಾಡಿದ ಸಂಘ ಪರಿವಾರಕ್ಕೆ ನಾಚಿಕೆಯಾಗಬೇಕು. ಇಂತಹ ಪುಂಡಾಟಿಕೆಗಳಿಗೆ ಬೊಮ್ಮಾಯಿ ನೇತೃತ್ವದ ಕೋಮುವಾದಿ ಬಿಜೆಪಿ ಸರ್ಕಾರವೇ ಹೊಣೆ. ಈ ಕೋಮುವಾದಿ ಸರ್ಕಾರ ತಮ್ಮ ಪರವಾಗಿ ನಿಲ್ಲುತ್ತದೆ ಎನ್ನುವುದೇ ಈ ರೌಡಿ ಪಡೆಗಳಿಗೆ ಧೈರ್ಯ ಎಂದು ಅವರು ಹೇಳಿದರು.

ಶಾಂತಿ ಮತ್ತು ಭಾವೈಕ್ಯತೆಯಿಂದ ಇರುವ ಬೀದರ್ ಜಿಲ್ಲೆಯಲ್ಲಿ ಶಾಂತಿಭಂಗ ಮಾಡುವುದೇ ಇವರ ಉದ್ದೇಶ. ಚುನಾವಣೆ ವರ್ಷದಲ್ಲಿ ಇನ್ನೇನು ಮನೆಗೆ ಹೋಗಬೇಕಾಗುತ್ತದೆ ಎನ್ನುವ ಭಯದಲ್ಲಿ ಬಿಜೆಪಿ ಸರ್ಕಾರ ಇಂತಹ ಕೀಳು ಮಟ್ಟದ ಕೃತ್ಯಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ಲತೀಫ್ ಆರೋಪಿಸಿದರು.

- Advertisement -

ಕೂಡಲೇ ಪುಂಡಾಟಿಕೆ ಮೆರೆದವರನ್ನು ಬಂಧಿಸಿ ಕಠಿಣ ಕಾನೂನುಗಳ ಅಡಿಯಲ್ಲಿ ಕೇಸು ದಾಖಲಿಸಬೇಕು. ಮುಸ್ಲಿಮರು ಕೆಮ್ಮಿದರೂ ಯುಎಪಿಎ, ಎನ್ ಎಸ್ ಎ ಹಾಕುವ ಫಾಶಿಸ್ಟ್ ಬಿಜೆಪಿ ಸರ್ಕಾರ ಇಂತಹ ಶಾಂತಿ ಭಂಗ ಮಾಡಿ ಗಲಭೆಗೆ ಪ್ರಚೋದನೆ ನೀಡುವ ಕೃತ್ಯ ಮಾಡಿದ ಪುಂಡರ ರಕ್ಷಣೆ ಮಾಡದೇ ಇವರ ಮೇಲೆ ಕಠಿಣ ಕಾನೂನುಗಳ ಅಡಿಯಲ್ಲಿ ಕೇಸು ದಾಖಲಿಸಬೇಕು. ಸರ್ಕಾರ ಈ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸಿ ಈ ಗೂoಡಾಗಳನ್ನು ರಕ್ಷಿಸುವ ಪ್ರಯತ್ನಕ್ಕೆ ಮುಂದಾದರೆ ಎಸ್ ಡಿಪಿಐ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಅವರು ಸರ್ಕಾರವನ್ನು ಎಚ್ಚರಿಸಿದರು.

Join Whatsapp