ಕಾಮನ್’ವೆಲ್ತ್ ಗೇಮ್ಸ್ 2022: ಭಾರತಕ್ಕೆ ಮೊದಲ ಪದಕ ತಂದ ವೇಟ್’ಲಿಫ್ಟರ್ ಸಂಕೇತ್

Prasthutha|

ಬರ್ಮಿಂಗ್‌ಹ್ಯಾಮ್‌: ಕಾಮನ್’ವೆಲ್ತ್ ಗೇಮ್ಸ್’ನ ಪುರುಷರ ವಿಭಾಗದ 55 ಕೆಜಿ ವೇಟ್’ಲಿಫ್ಟಿಂಗ್ ನಲ್ಲಿ ಭಾರತದ ಸಂಕೇತ್ ಸರ್ಗರ್ ಅವರು ಬೆಳ್ಳಿ ಪದಕವನ್ನು ಪಡೆಯುವ ಮೂಲಕ ದೇಶಕ್ಕೆ ಮೊದಲ ಪದಕದ ಖಾತೆ ತೆರೆದಿದ್ದಾರೆ.

- Advertisement -

21 ವರ್ಷದ ಸಂಕೇತ್ ಚಿನ್ನ ಗೆಲ್ಲುವ ಹಾದಿಯಲ್ಲಿ ಪರಿಶ್ರಮ ನಡೆಸುತ್ತಿದ್ದರು. ಅದರಲ್ಲಿ ವಿಫಲವಾದ ಅವರು 248 ಕೆಜಿಗಳೊಂದಿಗೆ ಎರಡನೇ ಸ್ಥಾನವನ್ನು ಪಡೆದರು.

ಮಲೇಷ್ಯಾದ ಮುಹಮ್ಮದ್ ಅನಿಕ್ 249 ಕೆಜಿಯನ್ನು ಎತ್ತುವ ಮೂಲಕ ಪ್ರಥಮ ಸ್ಥಾನವನ್ನು ಪಡೆದರೆ, ಶ್ರೀಲಂಕಾದ ದಿಲಂಕಾ ಇಸುರು 225 ಕೆಜಿಯನ್ನು ಎತ್ತಿಕ್ಕೊಂಡು ಕಂಚಿನ ಪದಕವನ್ನು ಪಡೆದರು.

- Advertisement -

ಕಳೆದ ಆವೃತ್ತಿಯಲ್ಲಿ ಭಾರತದ ಲಿಫ್ಟರ್’ಗಳು ಐದು ಚಿನ್ನ ಸೇರಿದಂತೆ ಒಂಬತ್ತು ಪದಕಗಳನ್ನು ಪಡೆದಿದ್ದರು. ಈ ಸಲವೂ ಭಾರತೀಯರೇ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.



Join Whatsapp