ಕಾಮನ್‌ವೆಲ್ತ್‌ ಗೇಮ್ಸ್‌ | ಗೆಲುವಿನತ್ತ ಧಾವಿಸಿ ಮುಗ್ಗರಿಸಿದ ಭಾರತ

Prasthutha|

4 ವರ್ಷಗಳ ಬಳಿಕ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಮರಳಿ ಸೇರ್ಪಡೆಯಾಗಿದ್ದ ಕ್ರಿಕೆಟ್‌ ಟೂರ್ನಿಯ ಮೊದಲ ಪಂದ್ಯದಲ್ಲೇ ಭಾರತ ಮಹಿಳಾ ತಂಡವು ಮುಗ್ಗರಿಸಿದೆ. ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ನಡೆದ ಟಿ- 20 ಪಂದ್ಯದಲ್ಲಿ ಹರ್ಮನ್​ ಪ್ರೀತ್ ಕೌರ್ ಬಳಗದ ವಿರುದ್ಧ, ಆಸ್ಟ್ರೇಲಿಯ ವನಿತೆಯರು 3 ವಿಕೆಟ್​​ಗಳ ಭರ್ಜರಿ ಗೆಲುವು ದಾಖಲಿಸಿ ಶುಭಾರಂಭ ಮಾಡಿದ್ದಾರೆ.

- Advertisement -

ಟಾಸ್‌ ಗೆದ್ದ ಮೊದಲು ಬ್ಯಾಟ್‌ ಮಾಡಿದ್ದ ಭಾರತ 8 ವಿಕೆಟ್‌ ನಷ್ಟದಲ್ಲಿ 154 ರನ್‌ ಗಳಿಸಿತ್ತು. ಗುರಿ ಬೆನ್ನಟ್ಟಿದ ಆಸೀಸ್‌, 7 ವಿಕೆಟ್‌ ನಷ್ಟದಲ್ಲಿ ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ 157 ರನ್‌ ಗಳಿಸಿ ಗೆಲುವಿನ ಸಂಭ್ರಮವನ್ನಾಚರಿಸಿದೆ.

49 ರನ್‌ ಗಳಿಸುವಷ್ಟರಲ್ಲಿಯೇ 5 ವಿಕೆಟ್‌ ಪತನ !

- Advertisement -

ಭಾರತ ನೀಡಿದ್ದ ಸವಾಲಿನ ಗುರಿ ಬೆನ್ನಟ್ಟುವ ವೇಳೆ ಆಸ್ಟ್ರೇಲಿಯ, ಕೇವಲ 49 ರನ್‌ ಗಳಿಸುವಷ್ಟರಲ್ಲಿಯೇ ಐವರು ಅಗ್ರಕ್ರಮಾಂಕದ ಆಟಗಾರರ ವಿಕೆಟ್‌ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ಆ ಬಳಿಕ ಒಂದಾದ ಆಶ್ಲೇ ಗಾರ್ಡನರ್‌ (52*)​​ ಮತ್ತು ಗ್ರೆಸ್ ಹ್ಯಾರಿಸ್‌ ​​(37) ಅತ್ಯುತ್ತಮ ಜತೆಯಾಟದ ಮೂಲಕ ತಂಡವನ್ನು ಅಮೋಘವಾಗಿ ಗೆಲುವಿನತ್ತ ಮುನ್ನಡೆಸಿದರು. ಹ್ಯಾರಿಸ್‌ ವಿಕೆಟ್‌ ಪತನವಾದರೂ ಕೊನೆಯಲ್ಲಿ ಅಲೆನಾ ಕಿಂಗ್‌ 18 ರನ್‌ ಗಳಿಸಿ ಅಜೇಯರಾಗುಳಿಯುವ ಮೂಲಕ ಭಾರತಕ್ಕೆ ಗೆಲುವನ್ನು ನಿರಾಕರಿಸಿದರು. ಭಾರತದ ಪರ ಬೌಲಿಂಗ್‌ನಲ್ಲಿ ರೇಣುಕಾ ಸಿಂಗ್​ 18 ರನ್‌ ನೀಡಿ 4 ವಿಕೆಟ್ ಪಡೆದರೆ,  ದೀಪ್ತಿ ಶರ್ಮಾ 2 ಹಾಗೂ ಮೇಘನಾ ಸಿಂಗ್ 1 ವಿಕೆಟ್ ಕಿತ್ತರು.

ಇದಕ್ಕೂ ಮೊದಲು ಬ್ಯಾಟ್‌ ಮಾಡಿದ್ಧ ಭಾರತ ತಂಡಕ್ಕೆ ಸ್ಮೃತಿ ಮಂಧಾನ (24 ರನ್) ಮತ್ತು ಶೆಫಾಲಿ ವರ್ಮಾ (48 ರನ್) ಉತ್ತಮ ಆರಂಭ ಒದಗಿಸಿದ್ದರು. ನಾಯಕಿ ಹರ್ಮನ್​ಪ್ರೀತ್ ಕೌರ್​‌ ಆಕರ್ಷಕ ಅರ್ಧ ಶತಕ ದಾಖಲಿಸಿ ಮಿಂಚಿದರು. ಆದರೆ, ಉಳಿದ ಆಟಗಾರರಿಂದ ನಿರೀಕ್ಷಿತ ಬೆಂಬಲ ದೊರಯಲಿಲ್ಲ. ಕೀಪರ್‌ ಯಸ್ತಿಕ್ ಭಾಟಿಯಾ‌ 8 ರನ್‌,  ರಾಡ್ರಿಗಸ್​​ 11 ರನ್​ ಗಳಿಸಿ ಔಟಾದರು. ಆಸಿಸ್​ ತಂಡದ ಪರ ಜೊನಾಸನ್​ ನಾಲ್ಕು ವಿಕೆಟ್ ಪಡೆದರೆ, ಮೇಘನ್​ ಸ್ಕಟ್​ 2 ಹಾಗೂ ಡಾರ್ಸಿ ಬ್ರೌನ್ 1 ವಿಕೆಟ್ ಪಡೆದರು.



Join Whatsapp