ಕಾಮನ್‌ವೆಲ್ತ್ ಗೇಮ್ಸ್, ಐದನೆಯ ಸ್ಥಾನಕ್ಕೆ ಜಿಗಿದ ಭಾರತ

Prasthutha|

ಕಾಮನ್‌ವೆಲ್ತ್ ಗೇಮ್ಸ್‌ನ ಕುಸ್ತಿ ಕಣದಲ್ಲಿ ಭಾರತವು ಮೂರು ಬಂಗಾರ, ಒಂದು ಬೆಳ್ಳಿ ಗೆಲ್ಲುವುದರೊಂದಿಗೆ ಪದಕ ಪಟ್ಟಿಯಲ್ಲಿ ಏಳನೆಯ ಸ್ಥಾನದಿಂದ ಐದನೆಯ ಸ್ಥಾನಕ್ಕೆ ಜಿಗಿಯಿತು.

- Advertisement -

ಸಾಕ್ಷಿ ಮಲಿಕ್ ಅವರು 62 ಕಿಲೋ ವಿಭಾಗದಲ್ಲಿ, ಬಜರಂಗ್ ಪೂನಿಯಾ 65 ಕಿಲೋ ವಿಭಾಗದಲ್ಲಿ ಮತ್ತು ದೀಪಕ್ ಪೂನಿಯಾರು 86 ಕಿಲೋ ವಿಭಾಗದಲ್ಲಿ ಚಿನ್ನದ ಗಳಿಕೆ ಮಾಡಿದರು. ಫ್ರೀ ಸ್ಟೈಲ್ ಕುಸ್ತಿಯ 57 ಕಿಲೋ ವಿಭಾಗದಲ್ಲಿ ಅನ್ಶು ಮಲಿಕ್ ಬೆಳ್ಳಿ ಕೊರಳಿಗೇರಿಸಿಕೊಂಡರು.

ಬಜರಂಗ್ ಪೂನಿಯಾ

- Advertisement -

ಪುರುಷರ 65 ಕೆಜಿ ವಿಭಾಗಕ್ಕೆ ನಡೆದ ಕುಸ್ತಿ ಪಂದ್ಯಾವಳಿಯ ಫೈನಲ್ ನಲ್ಲಿ ಕೆನಡಾದ ಲಾಚ್ಲಾನ್ ಮೆಕ್ನೀಲ್ ಅವರನ್ನು ಬಜರಂಗ್ ಪೂನಿಯಾ 9-2 ರಿಂದ ಸೋಲಿಸಿದರು. ಆ ಮೂಲಕ ಕುಸ್ತಿಯಲ್ಲಿ ಮೊದಲ ಚಿನ್ನ ಗೆದ್ದಿದ್ದರು.

ದೀಪಕ್ ಪೂನಿಯಾ

ಪುರುಷರ 86 ಕೆ.ಜಿ. ವಿಭಾಗದ ಫೈನಲ್ ನಲ್ಲಿ ದೀಪಕ್ ಪೂನಿಯಾ ಅವರು ಪಾಕಿಸ್ತಾನದ ಮುಹಮ್ಮದ್ ಇನಾಮ್ ಎದುರು 3–0 ಪಾಯಿಂಟ್ ಗಳಿಂದ ಗೆದ್ದರು. ದೀಪಕ್ ಮೊದಲ ಸುತ್ತಿನಲ್ಲಿ ನ್ಯೂಜಿಲೆಂಡ್ನ ಮ್ಯಾಥ್ಯೂ ಕ್ಲೇ, ಸೆಮಿಫೈನಲ್ ನಲ್ಲಿ ಕೆನಡಾದ ಅಲೆಕ್ಸಾಂಡರ್ ಮೂರ್ ಎದುರು ವಿಜಯ ಸಾಧಿಸಿದ್ದರು.

 ಸಾಕ್ಷಿ ಮಲಿಕ್

ಇಂದು ನಡೆದ ಮಹಿಳೆಯರ ಫ್ರೀ ಸ್ಟೈಲ್ 62 ಕೆಜಿ ವಿಭಾಗದಲ್ಲಿ ಭಾರತದ ಕುಸ್ತಿಪಟು ಸಾಕ್ಷಿ ಮಲಿಕ್ ಚಿನ್ನ ಗೆದ್ದಿದ್ದಾರೆ. ಕೆನಡಾದ ಗೊಡಿನೆಜ್ ಗೊನ್ಜಾಲೆಜ್ ಅವರನ್ನು ಫೈನಲ್‌ನಲ್ಲಿ ಸೋಲಿಸಿದರು. ಆ ಮೂಲಕ ಭಾರತ 8 ಚಿನ್ನದ ಪದಕಗಳನ್ನು ಗಳಿಸಿಕೊಂಡಿದೆ.

 ಬೆಳ್ಳಿಗೆ ತೃಪ್ತಿಪಟ್ಟ ಅಂಶು ಮಲಿಕ್

ಭಾರತದ ಕುಸ್ತಿಪಟು ಅಂಶು ಮಲಿಕ್ 57 ಕೆಜಿ ವಿಭಾಗದ ಫೈನಲ್ ಪ್ರವೇಶಿಸಿದ್ದರು. ಆದರೆ ಫೈನಲ್ ನಲ್ಲಿ ನೈಜೀರಿಯಾದ ಫೊಲಸಾಡೆ ಅಡೆಕುರೊಯೆ ವಿರುದ್ಧ 3-7 ಅಂತರದಲ್ಲಿ ಸೋತು ಬೆಳ್ಳಿಗೆ ತೃಪ್ತಿಪಟ್ಟಿದ್ದಾರೆ. ಭಾರತ ಈವರೆಗೆ ಒಟ್ಟು 9 ಚಿನ್ನ, 8 ಬೆಳ್ಳಿ, 8 ಕಂಚಿನ ಪದಕದ ಸಹಿತ ಒಟ್ಟು 24 ಪದಕಗಳನ್ನು ಗಳಿಸಿದೆ. ಆ ಮೂಲಕ ಪದಕ ಪಟ್ಟಿಯಲ್ಲಿ 5ನೇ ಸ್ಥಾನವನ್ನು ಕಾಯ್ದುಕೊಂಡಿದೆ.

ದಿವ್ಯಾಗೆ ಕಂಚು

ಮಹಿಳೆಯರ 68 ಕೆಜಿ ಕುಸ್ತಿಯ ವಿಭಾಗದಲ್ಲಿ ದಿವ್ಯಾ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ಪದಕ ಪಟ್ಟಿಯಲ್ಲಿ ಭಾರತವು ಐದನೆಯ ಸ್ಥಾನ ಹಿಡಿದಿದೆ. ಕ್ರಮವಾಗಿ ಚಿನ್ನ, ಬೆಳ್ಳಿ, ಕಂಚು 50- 44- 46 ಗೆದ್ದ ಆಸ್ಟ್ರೇಲಿಯಾ, 47- 46- 38 ಗೆದ್ದ ಇಂಗ್ಲೆಂಡ್, 19- 24- 24 ಜಯಿಸಿದ ಕೆನಡಾ, 17- 11- 13 ಪದಕ ಪಿಡಿದ ನ್ಯೂಜಿಲ್ಯಾಂಡ್, 9- 8- 9 ಗೆಲ್ದ ಭಾರತ ಮೊದಲ ಐದು ಸ್ಥಾನಗಳಲ್ಲಿ ಇವೆ.

ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ, ನೈಜೀರಿಯಾ, ವೇಲ್ಸ್, ಮಲೇಶಿಯಾ ಆರೇಳೆಂಟೊಂಬ್ಹತ್ತರ ಸ್ಥಾನಗಳಲ್ಲಿ ಇವೆ.

ಒಟ್ಟು 36 ದೇಶಗಳು ಪದಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಸ್ಕಾಟ್ಲೆಂಡ್ ಒಟ್ಟು ಪದಕಗಳಲ್ಲಿ ಭಾರತಕ್ಕಿಂತ ಹೆಚ್ಚು ಪಡೆದರೂ ಅದರಲ್ಲಿ 19 ಕಂಚು ಆಗಿರುವುದರಿಂದ ಕೆಳ ಜಾರಿದೆ.

ವೇಲ್ಸ್ ಮತ್ತು ಸ್ಕಾಟ್ಲೆಂಡ್ ಹಾಗೂ ಕೆಲವು ಬ್ರಿಟನ್ನಿನ ಭಾಗವಾಗಿದ್ದರೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತವೆ.

Join Whatsapp