ರಾಸಾಯನಿಕ ಚುಚ್ಚಿಕೊಂಡು ಯುವ ವೈದ್ಯೆ ಆತ್ಮಹತ್ಯೆ

Prasthutha|

ಭೋಪಾಲ್: ಯುವ ವೈದ್ಯೆಯೊಬ್ಬರು ರಾಸಾಯನಿಕ ಔಷಧವನ್ನು ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭೋಪಾಲ್ ನ ಸರ್ಕಾರಿ ಸ್ವಾಮ್ಯದ ಗಾಂಧಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ನಲ್ಲಿ ನಡೆದಿದೆ.

- Advertisement -


ಆಕಾಂಶಾ ಮಹೇಶ್ವರಿ ಮೃತರು ಎಂದು ಗುರುತಿಸಲಾಗಿದೆ.


ಪೊಲೀಸರು ಆಕೆಯ ಕೊಠಡಿಯಿಂದ ಖಾಲಿ ಇಂಜೆಕ್ಷನ್ ಬಾಟಲುಗಳು ಮತ್ತು ಸಿರಿಂಜ್ ಅನ್ನು ವಶಪಡಿಸಿಕೊಂಡಿದ್ದಾರೆ.
ಇನ್ನು ವೈದ್ಯೆ ಆತ್ಮಹತ್ಯೆ ಮಾಡಿಕೊಂಡ ಕೊಠಡಿಯಲ್ಲಿ ಪತ್ರವೊಂದು ಸಿಕ್ಕಿದ್ದು, ಅದರಲ್ಲಿ ತನಗೆ ಮಾನಸಿಕವಾಗಿ ಬಲವಿಲ್ಲ ಮತ್ತು ಕೆಲಸದೊತ್ತಡ ತಾಳಲಾಗುತ್ತಿಲ್ಲ ಎಂದು ಬರೆದುಕೊಂಡಿರುವ ಅವರು ಪೋಷಕರಿಗೆ ಕ್ಷಮೆಯಾಚಿಸಿದ್ದಾರೆ.

Join Whatsapp