ಮಂಗಳೂರು: ನರಮೇಧ, ವಂಶ ಹತ್ಯೆಗಳ ಮೂಲಕ ರಕ್ತದೋಕುಳಿ ನಡೆಸಿ ದೇಶದಲ್ಲಿ ಮರಣದ ವ್ಯಾಪಾರಕ್ಕೆ ಮುನ್ನುಡಿ ಬರೆದವರಿಗೆ ಚುನಾವಣೆಯ ಹೊಸ್ತಿಲಲ್ಲ ರಕ್ತದ ಕಮಟು ವಾಸನೆ ಕೇಸರಿ ಬಣ್ಣದಲ್ಲಿ ಮೂಗಿಗೆ ಬಡಿಯುತ್ತಿದೆ ಎಂದು SDPI ದ.ಕ. ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಹೇಳಿದ್ದಾರೆ.
ಬಿಜೆಪಿ ಸಂಘಪರಿವಾರದ ನಾಯಕರಿಗೆ ಚುನಾವಣಾ ಪ್ರಚಾರಕ್ಕೆ ರಕ್ತದ ಬಣ್ಣ, ಧರ್ಮದ ಲಾಂಛನವೇ ಪ್ರಧಾನ ಅಸ್ತ್ರವಾಗಿದೆ ಎಂದು ಅವರು Xನಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್, ದಕ್ಷಿಣ ಕನ್ನಡ ಜಿಲ್ಲೆಯ ಜನರ ರಕ್ತದ ಬಣ್ಣ ಕೇಸರಿ, ಕುಯ್ದ್ರೆ ಬರೋದು ಕೆಂಪು ರಕ್ತ ಅಲ್ಲ, ಕೇಸರಿ ಬಣ್ಣದ ರಕ್ತ ಎಂದು ಪುತ್ತೂರಿನಲ್ಲಿ ನಡೆದ ನಾರಿಶಕ್ತಿ ಮಹಿಳಾ ಸಮಾವೇಶದಲ್ಲಿ ಭಾಷಣ ಮಾಡಿದ್ದರು.