ಕಾಲೇಜ್ ಬಸ್ ಬೈಕ್ ನಡುವೆ ಅಪಘಾತ: ಸವಾರ ಸ್ಥಳದಲ್ಲೇ ಸಾವು

Prasthutha|

ಬಳ್ಳಾರಿ: ಕಾಲೇಜ್ ಬಸ್ ಹಾಗೂ ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹೊಸಪೇಟೆ ರಸ್ತೆಯ ರಾಮೇಶ್ವರಿ ನಗರದ ಸಮೀಪ ನಡೆದಿದೆ.

- Advertisement -


ಬಳ್ಳಾರಿ ನಿವಾಸಿ ಸಂಜೀವ್ (44) ಮೃತಪಟ್ಟವರು ಎಂದು ತಿಳಿದು ಬಂದಿದೆ. ಹೊಸಪೇಟೆ ಕಡೆಯಿಂದ ಬರುತ್ತಿರುವ ಬೈಕ್ ಗೆ ಬಸ್ ಡಿಕ್ಕಿ ಹೊಡೆದಿದೆ.


ಈ ಬಗ್ಗೆ ಹೊಸಪೇಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp