ವಲಯವಾರು ಗುರುತಿಗೆ ಅನುಕೂಲವಾಗುವಂತೆ ಆಟೋ ರಿಕ್ಷಾಗಳಿಗೆ ಬಣ್ಣ ಹಾಕಿಸಲು ಜಿಲ್ಲಾಧಿಕಾರಿ ಸೂಚನೆ

Prasthutha|

ಮಂಗಳೂರು: ನಗರ ವ್ಯಾಪ್ತಿ (ವಲಯ-1) ಯ ಆಟೋ ರಿಕ್ಷಾ ಗಳಿಗೆ ಹಳದಿ ಮತ್ತು ಕಪ್ಪು ಹಾಗೂ ಗ್ರಾಮಾಂತರ (ವಲಯ-2) ರಲ್ಲಿ ಬರುವ ಆಟೋ ರಿಕ್ಷಾ ಗಳಿಗೆ ಹಸಿರು ಹಾಗೂ ಹಳದಿ ಬಣ್ಣ ಹಾಕಿಸುವಂತೆ ಜಿಲ್ಲಾಧಿಕಾರಿ ಡಾ. ಕುಮಾರ್ ಅವರು ತಿಳಿಸಿದರು.

- Advertisement -

ಅವರು ಅ. 27ರ ಗುರುವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಲಯ ಒಂದರಲ್ಲಿ ಬರುವ ಎಲ್ಲಾ ಮಾದರಿಯ ಆಟೋ ರಿಕ್ಷಾ ಗಳು ಹಳದಿ ಹಾಗೂ ಕಪ್ಪು, ವಲಯ ಎರಡರಲ್ಲಿ ಬರುವ ಎಲ್ಲಾ ಮಾದರಿಯ ಆಟೋ ರಿಕ್ಷಾಗಳು (ಎಲೆಕ್ಟ್ರಿಕಲ್, ಸಿ ಎನ್ ಜಿ ಹಾಗೂ ಡೀಸೆಲ್, ಪೆಟ್ರೋಲ್ ) ಕಡ್ಡಾಯವಾಗಿ ಹಸಿರು ಹಾಗೂ ಹಳದಿ ಬಣ್ಣವನ್ನು ಹಾಕಿಸಿಕೊಳ್ಳಬೇಕು, ಯಾವುದೇ ಕಾರಣಕ್ಕೂ ಸ್ಟಿಕ್ಕರ್ ಅಳವಡಿಸಿಕೊಳ್ಳುವಂತೆ ಇಲ್ಲ, ಬಣ್ಣ ಹಾಕಿಸಿಕೊಳ್ಳಲು ಅಗತ್ಯವಾದ ಕಾಲಾವಕಾಶ ನೀಡಲಾಗುವುದು, ಈ ಮೂಲಕ ಆಟೋ ರಿಕ್ಷಾಗಳು ತಮ್ಮ ವ್ಯಾಪ್ತಿಯನ್ನು ನಿರ್ಧರಿಸಿಕೊಳ್ಳಲು ಅನುಕೂಲವಾಗಲಿದೆ, ಆ ಮೂಲಕ ಗೊಂದಲಗಳಿಗೆ ತೆರೆ ಎಳೆಯಬಹುದಾಗಿದೆ ಎಂದು ಹೇಳಿದರು.

- Advertisement -

ಆರೋಗ್ಯಕ್ಕೆ ಸಂಬಂಧಿಸಿದಂತೆ ತುರ್ತು ಸಂದರ್ಭದಲ್ಲಿ ಸೇವೆ ಸಲ್ಲಿಸುವ ಆಟೋ ರಿಕ್ಷಾಗಳು ಮಾತ್ರ ತಮ್ಮ ವ್ಯಾಪ್ತಿಯನ್ನು ಮೀರಬಹುದಾಗಿದೆ, ಇಂತಹ ಸಂದರ್ಭಗಳಲ್ಲಿ ಅಗತ್ಯ ದಾಖಲಾತಿ ಇಟ್ಟುಕೊಳ್ಳಬೇಕು, ಅದನ್ನ ಹೊರತು ಪಡಿಸಿ ತಮ್ಮ ರಹದಾರಿಯ ವ್ಯಾಪ್ತಿ ಮೀರಿದರೆ, ಸಂಬಂಧಿಸಿದ ಪ್ರಾಧಿಕಾರದವರು ಕ್ರಮಕೈಗೊಳ್ಳುವರು, ಒಂದೊಮ್ಮೆ ಇಂಧನ ಅಥವಾ ಎಲ್ ಪಿ ಜಿ ಭರಿಸಿಕೊಂಡು ಹಿಂತಿರುಗುವಾಗ ದಂಡ ವಿಧಿಸಿದ್ದಲ್ಲಿ ಆ ಬಗ್ಗೆ ಪಟ್ಟಿ ಒದಗಿಸುವಂತೆ ಅವರು ತಿಳಿಸಿದರು.

ಆಟೋ ರಿಕ್ಷಾ ದರ ಪರಿಷ್ಕರಣಿಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಆಟೋರಿಕ್ಷಾ ಸಂಘದವರು ಹಾಗೂ ಜಿಲ್ಲಾಡಳಿತ ನಡುವೆ ಸಹಮತ ಬರದಿರುವ ಕಾರಣ ಮುಂದಿನ ಸಭೆಯಲ್ಲಿ ದರ ಪರಿಷ್ಕರಣೆಯ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಪ್ರಾದೇಶಿಕ ಸಾರಿಗೆ ಅಧಿಕಾರಿ ರವಿಶಂಕರ್, ಸಂಚಾರಿ ವಿಭಾಗದ ಎಸಿಪಿ ಗೀತಾ ಕುಲಕರ್ಣಿ, ರಿಕ್ಷಾ ಚಾಲಕ-ಮಾಲಕರ ಒಕ್ಕೂಟದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಅಬುಬಕರ್ ಸುರತ್ಕಲ್, ಗೌರವಾಧ್ಯಕ್ಷ ವಿಷ್ಣುಮೂರ್ತಿ, ಕಾರ್ಯದರ್ಶಿ ಭರತ್ ಕುಮಾರ್, ಸಲಹೆಗಾರರಾದ ಮೊಹಮ್ಮದ್ ಇರ್ಫಾನ್, ಅರುಣ್ ಕುಮಾರ್ ಸೇರಿದಂತೆ ಆಟೋ ರಿಕ್ಷಾ ಚಾಲಕರು ಹಾಗೂ ಮಾಲಕರು ಸಭೆಯಲ್ಲಿದ್ದರು.



Join Whatsapp