ಮಂಗಳೂರು: ಬೆಳ್ಳಾರೆಯಲ್ಲಿ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಮನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ಮಾಡಿ, ಕುಟುಂಬಸ್ಥರೊಂದಿಗೆ ಮಾತನಾಡಿದರು. ಜೊತೆಗೆ 5 ಲಕ್ಷ ಪರಿಹಾರ ಧನವನ್ನೂ ಘೋಷಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಶೋಭಾ, ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ಟಾರ್ಗೆಟ್ ಮಾಡಿ ಕೊಲ್ಲಲಾಗಿದೆ. ಕೇರಳ ಮಾದರಿಯಲ್ಲಿ ಈ ಹತ್ಯೆ ನಡೆದಿದೆ. ಪಿಎಫ್ಐನಂತಹ ಸಂಘಟನೆಗಳು ತರಬೇತಿ ಪಡೆದು ಕೊಲ್ಲುವ ರೀತಿ ಇದು. ಈ ವಿಚಾರವನ್ನು ಕೇಂದ್ರ ಗೃಹಮಂತ್ರಿಗಳ ಗಮನಕ್ಕೆ ತರಲಾಗಿದೆ. ಜೊತೆಗೆ ಪಿಎಫ್ಐ ಸಂಘಟನೆಯ ನಿಷೇಧಕ್ಕೆ ನಾವು ಮಾಹಿತಿ ಸಂಗ್ರಹ ನಡೆಸುತ್ತಿದ್ದೇವೆ ಎಂದು ಹೇಳಿದರು
ಶೋಭಾ ಹೇಳಿಕೆಗೆ ಸಾಮಾಜಿಕ ವಲಯಗಳಲ್ಲಿ ಪ್ರತಿಕ್ರಿಸಿದ ನೆಟ್ಟಿಗರು, ತನ್ನ ಕ್ಷೇತ್ರದ ಅಭಿವೃದ್ದಿ ಬಗ್ಗೆ ಚಿಂತಿಸದ ಸಂಸದೆ ರಾಜ್ಯದಲ್ಲಿ ಎಲ್ಲಿ ಹೆಣ ಬಿದ್ದರೂ ತಕ್ಷಣ ಪ್ರತ್ಯಕ್ಷವಾಗುತ್ತಾರೆ. ಜೊತೆಗೆ ಯಾವುದೇ ದುರ್ಘಟನೆಗಳು ನಡೆದರೂ ಅದಕ್ಕೆ ಪಿಎಫ್ಐ ಸಂಘಟನೆಯ ನಂಟು ಕಟ್ಟುವ ಅವರ ಸ್ವಭಾವ ರಾಜ್ಯದ ಜನತೆಗೆ ಹೊಸದೇನಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.