ಕಾಲೇಜು ಬಸ್ ಅಪಘಾತ: ಓರ್ವ ಮೃತ್ಯು, 44 ಮಂದಿಗೆ ಗಾಯ

Prasthutha|

- Advertisement -

ಇಡುಕ್ಕಿ: ಕಾಲೇಜು ವಿದ್ಯಾರ್ಥಿಗಳ ಪ್ರವಾಸಿ ಬಸ್ ಅಪಘಾತವಾಗಿ ವಿದ್ಯಾರ್ಥಿಯೊಬ್ಬ ಮೃತಪಟ್ಟು, 44 ಮಂದಿ ಗಾಯಗೊಂಡಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಆದಿಮಾಲಿ ಬಳಿ ಭಾನುವಾರ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಮಿಲ್ಹಾಜ್ ಎಂದು ಗುರುತಿಸಲಾಗಿದೆ.

- Advertisement -

ಬಸ್ ಮಲಪ್ಪುರಂನ ತಿರೂರ್ನಲ್ಲಿರುವ ಪ್ರಾದೇಶಿಕ ಕೈಗಾರಿಕಾ ತರಬೇತಿ ಸಂಸ್ಥೆಯ (ಐಟಿಐ) ವಿದ್ಯಾರ್ಥಿಗಳು ಪ್ರವಾಸಕ್ಕೆ ಹೋಗುತ್ತಿದ್ದಾಗ ಕಲ್ಲರಕುಟ್ಟಿ-ಮೈಲಾಡುಂಪಾರ ಮಾರ್ಗದ ತಿಂಗಳಕಡ್ ಸಮೀಪದ ಮುನಿಯಾರ ಎಂಬಲ್ಲಿ ಈ ದುರ್ಘಟನೆ ನಡೆದಿದೆ.

Join Whatsapp