ಹೆಜ್ಜೇನು ದಾಳಿಯಿಂದ ಕಾಫಿ ಮಂಡಳಿ ಅಧ್ಯಕ್ಷ ಮೃತ್ಯು

Prasthutha|

ಚಿಕ್ಕಮಗಳೂರು: ಹೆಜ್ಜೇನು ದಾಳಿಗೆ ಚಿಕ್ಕಮಗಳೂರು ಜಿಲ್ಲೆಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಭೋಜೇಗೌಡ ಸಾವನ್ನಪ್ಪಿದ್ದಾರೆ.
ಅವರಿಗೆ 73 ವರ್ಷ ವಯಸ್ಸಾಗಿತ್ತು. ತಾಲೂಕಿನ ಕೃಷ್ಣಗಿರಿ ಕಾಫಿ ತೋಟದಲ್ಲಿ ಈ ದುರಂತ ಘಟನೆ ನಡೆದಿದೆ.

- Advertisement -

ಸಾವಿರಾರು ಹೆಜ್ಜೇನುಗಳು ದಾಳಿ ಮಾಡಿದ್ದರಿಂದ ಭೋಜೇಗೌಡರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶನಿವಾರ ಬೆಳಗ್ಗೆ ಚಿಕ್ಕಮಗಳೂರಿನ ಕೈಮರ – ದಾಸರಹಳ್ಳಿ ಸಮೀಪದ ತನ್ನ ಕೃಷ್ಣಗಿರಿ ತೋಟಕ್ಕೆ ತೆರಳಿದ್ದ ವೇಳೆ ಹೆಜ್ಜೇನು ದಾಳಿ ನಡೆಸಿದ್ದು, ತೀವ್ರವಾಗಿ ಗಾಯಗೊಂಡ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.

- Advertisement -

ಭೋಜೇಗೌಡರು ಸತತ 2ನೇ ಬಾರಿಗೆ ಕಾಫಿ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಎರಡು ಬಾರಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಒಂದು ಬಾರಿ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿಯೂ ಎಂ.ಎಸ್. ಬೋಜೇಗೌಡ ಕೆಲಸ ಮಾಡಿದ್ದಾರೆ.

Join Whatsapp