ಫುಟ್ಬಾಲ್‌ ತಾರೆ ರೊನಾಲ್ಡೊ ನೀರಿನ ಬಾಟಲಿ ಎತ್ತಿಕೊಂಡದ್ದಕ್ಕೆ ಕೊಕಾಕೊಲಾ ಕಂಪೆನಿಗೆ ಬರೋಬ್ಬರಿ 29,318 ಕೋಟಿ ರೂ. ನಷ್ಟ!*

Prasthutha: June 16, 2021

ಹಂಗೇರಿ : ಕ್ರೀಡಾ ತಾರೆಯರು, ಚಿತ್ರ ನಟ-ನಟಿಯರು, ಸೆಲೆಬ್ರಿಟಿಗಳನ್ನು ಜನರು ಯಾವ ಮಟ್ಟಕ್ಕೆ ಹಿಂಬಾಲಿಸುತ್ತಾರೆ ಎಂಬುದು ಈ ಒಂದು ಸನ್ನಿವೇಶದಿಂದ ಅರ್ಥ ಮಾಡಿಕೊಳ್ಳಬಹುದು. ಜಗದ್ವಿಖ್ಯಾತ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಒಂದು ಸಣ್ಣ ಕೆಲಸದಿಂದ ಕೊಕಾಕೊಲಾದಂತಹ ಬಹುರಾಷ್ಟ್ರೀಯ ಕಂಪೆನಿಗೆ ಬರೋಬ್ಬರಿ 4 ಬಿಲಿಯನ್‌ ಡಾಲರ್‌ ಅಂದರೆ ಸುಮಾರು 29,318 ಕೋಟಿ ರೂ. ನಷ್ಟವಾಗಿದೆ ಎಂದರೆ ನೀವು ನಂಬುತ್ತೀರಾ? ನಂಬಲೇ ಬೇಕು. ಅಂತಹ ವರದಿಯೊಂದು ಭಾರೀ ಚರ್ಚೆಗೊಳಪಟ್ಟಿದೆ.

ಪೋರ್ಚುಗಲ್‌ ಮತ್ತು ಹಂಗೇರಿ ನಡುವೆ ಯುರೋ ಕಪ್‌ ಫುಟ್ಬಾಲ್‌ ಪಂದ್ಯ ನಡೆಯುತ್ತಿದೆ. ಈ ವೇಳೆ ರೊನಾಲ್ಡೊ ಅವರು ಪತ್ರಿಕಾಗೋಷ್ಠಿಯೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಕುಳಿತುಕೊಳ್ಳಲಿದ್ದ ಕುರ್ಚಿಯ ಮುಂದಿನ ಟೇಬಲ್‌ ನಲ್ಲಿ ಎರಡು ಬಾಟಲ್‌ ಕೊಕಾಕೊಲಾ ಬಾಟಲಿಗಳನ್ನಿಡಲಾಗಿತ್ತು. ಅಲ್ಲದೆ, ಒಂದು ನೀರಿನ ಬಾಟಲಿಯೂ ಇತ್ತು.

ರೊನಾಲ್ಡೊ ಅವರು ಬಂದ ಕೂಡಲೇ, ಕೊಕಾಕೊಲಾ ಬಾಟಲಿಗಳನ್ನು ಪಕ್ಕಕ್ಕಿಟ್ಟು, ನೀರಿನ ಬಾಟಲಿಯನ್ನು ಎತ್ತಿ ಹಿಡಿದು, ನೀರು ಕುಡಿಯಿರಿ ಎಂದು ಹೇಳಿದ್ದಷ್ಟೇ. ಕೆಲವೇ ಗಂಟೆಗಳಲ್ಲಿ ಈ ವೀಡಿಯೊ ವೈರಲ್‌ ಆಗಿ, ಕೊಕಾಕೊಲಾದ ಶೇರುಕಟ್ಟೆ ದಿಢೀರ್‌ ಕುಸಿದಿದೆ. ಅದೇನೋ ಅಂತಿಂತಹ ಕುಸಿತವಲ್ಲ. ಬರೋಬ್ಬರಿ 4 ಬಿಲಿಯನ್‌ ಡಾಲರ್‌ ಮೌಲ್ಯದ ಶೇರು ಕುಸಿದಿದೆ. ಇಷ್ಟೊಂದು ಬೃಹತ್‌ ಮೊತ್ತ ಕೊಕಾಕೊಲಾಗೆ ನಷ್ಟವಾಗಿದೆ ಎಂದು ವರದಿಗಳು ತಿಳಿಸಿವೆ.

ಯೂರೊ ಕಪ್‌ ನಲ್ಲಿ ಕೊಕಾಕೊಲಾ ಕೂಡ ಪ್ರಾಯೋಕತ್ವ ವಹಿಸಿಕೊಂಡಿತ್ತು. ಹೀಗಾಗಿ ಕೊಕಾಕೊಲಾ ಬಾಟಲಿಗಳನ್ನು ಅಲ್ಲಿಡಲಾಗಿತ್ತು. ಈಗ ಕಂಪೆನಿಗೆ ಸಾವಿರಾರು ಕೋಟಿ ನಷ್ಟವಾಗಿರುವುದರಿಂದ, ಸಂಘಟಕರು ರೊನಾಲ್ಡೊ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ