ಬೆಳಗ್ಗಿನ ಆಝಾನ್ ಗೆ ಧ್ವನಿವರ್ಧಕ ಬಳಕೆ ಕುರಿತು ಕರಾವಳಿಯಲ್ಲೂ ಶೀಘ್ರ ನಿರ್ಧಾರ : ಮೌಲಾನಾ ಶಾಫಿ ಸಅದಿ

Prasthutha|

ಉಡುಪಿ: ಬೆಳಗ್ಗಿನ ಆಝಾನ್ ಗೆ ಧ್ವನಿವರ್ಧಕ ಬಳಕೆ ವಿಚಾರವಾಗಿ ಕರಾವಳಿ ಜಿಲ್ಲೆಗಳ ಉಲೆಮಾಗಳ ಸಭೆಯ ನಂತರ ನಿರ್ಧರಿಸಲಾಗುವುದಾಗಿ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಶಾಫಿ ಸಅದಿ ತಿಳಿಸಿದ್ದಾರೆ.

- Advertisement -

ಉಡುಪಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಧ್ವನಿರ್ವಧಕ ಬಳಕೆ ಕುರಿತ ಸುಪ್ರೀಂ ಕೋರ್ಟ್ ಆದೇಶವು ಮುಸಲ್ಮಾನರ ಬೆಳಗ್ಗಿನ ಆಝಾನ್ ಗಷ್ಟೇ ತೊಂದರೆಯಾಗಲಿದೆ. ಬಾಕಿ ಉಳಿದಂತೆ ಯಾವ ಆಝಾನ್ ಕೂಡಾ ಆದೇಶವನ್ನು ಮೀರುತ್ತಿಲ್ಲ. ಹಾಗಾಗಿ ಬೆಳಗ್ಗಿನ ಆಝಾನ್ ಕುರಿತು ಎರಡು ದಿನಗಳಲ್ಲಿ ಉಲೆಮಾಗಳ ಸಭೆಯಲ್ಲಿ ಒಂದು ನಿರ್ದಿಷ್ಟ ತೀರ್ಮಾನಕ್ಕೆ ಬರುವುದಾಗಿ ಶಾಫಿ ಸಅದಿ ಹೇಳಿದ್ದಾರೆ.

ಸುಪ್ರೀಂ ಕೋರ್ಟಿನ ತೀರ್ಪಿನಂತೆ ರಾತ್ರಿ 10ಗಂಟೆಯಿಂದ ಬೆಳಗ್ಗೆ 6ಗಂಟೆ ಅವಧಿಯಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಮಾತ್ರವಲ್ಲದೆ ಯಾವುದೇ ಕಾರ್ಯಕ್ರಮಗಳಲ್ಲಿಯೂ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಇದರಿಂದ ಆಝಾನ್‌ಗಳಿಗೆ ಮಾತ್ರವಲ್ಲದೆ ಮಠಮಂದಿರಗಳಿಗೂ ತೊಂದರೆ ಆಗುತ್ತದೆ. ಈ ಕುರಿತು ಈಗಾಗಲೇ ಸಂಪರ್ಕಿ ಸಿದ ವಿವಿಧ ಸ್ವಾಮೀಜಿಗಳು ಆತಂಕ ವ್ಯಕ್ತಪಡಿಸಿದ್ದಾರೆ ಎಂದರು.

- Advertisement -

ಬೆಂಗಳೂರಿನಲ್ಲಿ ಉಲೆಮಾಗಳು ಈಗಾಗಲೇ ಸಭೆ ಕರೆದು ತೀರ್ಮಾನ ತೆಗೆದುಕೊಂಡಿದ್ದಾರೆ. ಅದೇ ರೀತಿ ಕರಾವಳಿಯಲ್ಲೂ ಒಮ್ಮತದ ತೀರ್ಮಾನಕ್ಕೆ ಬರಬೇಕಾಗಿದೆ. ನಮ್ಮಿಂದ ಯಾರಿಗೂ ಯಾವುದೇ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಉಲೆಮಾಗಳು ಉತ್ತಮ ತೀರ್ಮಾನ ತೆಗೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.



Join Whatsapp