ಕೋಸ್ಟಲ್ ಟರ್ಫ್ ಲೀಗ್ ಕ್ರಿಕೆಟ್ ಪಂದ್ಯಾಟ: ಕೋಸ್ಟಲ್ ಕೌಂಟಿ ಕ್ಲಬ್ ಚಾಂಪಿಯನ್ಸ್

Prasthutha|

ಮಂಗಳೂರು:  ಕೋಸ್ಟಲ್ ಕೌಂಟಿ ಕ್ಲಬ್ ಪ್ರಾಯೋಜಕತ್ವದ ಕೋಸ್ಟಲ್ ಟರ್ಫ್ ಲೀಗ್, ನಿಗದಿತ ಓವರ್ ಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟವು ಪರ್ಫೆಕ್ಟ್ ಪಾಸ್ ಫಲ್ನೀರ್ ನಲ್ಲಿ ನಡೆಯಿತು. ಟರ್ಫ್ ಷರ್ವಾನ್, ಅಸಿಲ್ (ಟೀಮ್ ಮ್ಯಾನೇಜರ್), ನೌಷಾರ್ (ಟೀಮ್ ಮೆಂಟರ್) ಹಾಗೂ ಅವ್ಫಾಝ್ ಕೃಷ್ಣಾಪುರ ಇವರ ಸಹಕಾರ ಹಾಗೂ ಪ್ರಾಯೋಜಕತ್ವದಲ್ಲಿ ನಡೆದ ಈ ಕ್ರಿಕೆಟ್ ಪಂದ್ಯಾಕೂಟದ ಫೈನಲ್ ಪಂದ್ಯದಲ್ಲಿ ಕೋಸ್ಟಲ್ ಕೌಂಟಿ ಕ್ಲಬ್ ತಂಡವು ಟೀಮ್ ಬ್ಯಾಕ್ ಸ್ಟ್ರೀಟ್ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.

- Advertisement -

ಒಟ್ಟು 8 ಪ್ರತಿಷ್ಠಿತ ತಂಡಗಳು ಭಾಗವಹಿಸಿದ ಈ ಕ್ರಿಕೆಟ್ ಪಂದ್ಯಾಕೂಟದ ರೋಚಕ ಹಣಾಹಣಿಯ ಸೆಮಿಫೈನಲ್ ಪಂದ್ಯದಲ್ಲಿ ಕೋಸ್ಟಲ್ ಕೌಂಟಿ ಕ್ಲಬ್ ತಂಡವು ಸಿ.ಸಿ.ಸಿ. ತಂಡವನ್ನು ಹಾಗೂ ಟೀಮ್ ಬ್ಯಾಕ್ ಸ್ಟ್ರೀಟ್ ತಂಡವು ಮಂಗಳೂರು ಸ್ಟ್ರೈಕರ್ಸ್ ತಂಡವನ್ನು ಸೋಲಿಸಿ ಕ್ರಮವಾಗಿ ಫೈನಲ್ ಪ್ರವೇಶಿಸಿದವು. ಪಂದ್ಯಾಕೂಟದ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ  ಪ್ರಶಸ್ತಿಯನ್ನು ತಫ್ಸೀರ್ (CCC), ಪಂದ್ಯಾಕೂಟದ ಉತ್ತಮ ದಾಂಡಿಗ ಪ್ರಶಸ್ತಿಯನ್ನು ಇಮ್ರಾನ್ (CCC), ಉತ್ತಮ ಎಸೆತಗಾರನಾಗಿ ಅವ್ಫಾಝ್ ಕೃಷ್ಣಾಪುರ, ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಯು ಜಿತೇಶ್ ಜೈನ್ ರವರು ತನ್ನದಾಗಿಸಿಕೊಂಡರು.

ಪ್ರಶಸ್ತಿ ವಿತರಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಸಾಜಿದ್, ಮೆಹಫೂಝ್, ಜಿಶಾನ್ ಭಾಗವಹಿಸಿದ್ದರು. ಪಂದ್ಯಾಕೂಟದ ಕೊನೆವರೆಗೂ ಸ್ಕೋರರ್ ಆಗಿ  ಫಾಹಿಕ್ ಮತ್ತು ಸಿನಾನ್ ಹಾಗೂ ತೀರ್ಪುಗಾರರಾಗಿ ಸಫ್ವಾನ್, ಸಲೀಂ , ಆಷಿಕ್, ನೌಫಾಲ್ ಸಹಕರಿಸಿದರು. ಪಂದ್ಯಾಕೂಟವು ಯಶಸ್ವಿಯಾಗಿ ಮೂಡಿಬರಲು ಸಹಕರಿಸಿದ ಪ್ರತಿಯೊಂದು ತಂಡ, ಪ್ರೇಕ್ಷಕ ಅಭಿಮಾನಿಗಳು, ಪ್ರಾಯೋಜಕರು ಹಾಗೂ ಸರಣಿಯ ಯಶಸ್ವಿಗೆ ಕಾರ್ಯನಿರ್ವಹಿಸಿದ ಎಲ್ಲರಿಗೂ ಸಂಘಟಕರು ಕಾರ್ಯಕ್ರಮದ ಕೊನೆಯಲ್ಲಿ ಅಭಿನಂದಿಸಿದರು.

Join Whatsapp