KSRTC ಬಸ್’ನಲ್ಲಿ ಯುವತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ ಸಹ ಪ್ರಯಾಣಿಕ

Prasthutha|

ಬೆಂಗಳೂರು: ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಕೃತ್ಯ ಮಾಸುವ ಮುನ್ನವೇ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್’ಆರ್’ಟಿಸಿ) ಬಸ್ನಲ್ಲಿಯೇ ಸಹ ಪ್ರಯಾಣಿಕ ಯುವತಿಯೊಬ್ಬರ ಮೇಲೆ ಯುವಕನೊಬ್ಬ ಮೂತ್ರ ವಿಸರ್ಜನೆ ಮಾಡಿರುವ ಘಟನೆ ನಡೆದಿದೆ.

- Advertisement -


ವಿಜಯಪುರದಿಂದ ಮಂಗಳೂರಿಗೆ ನಿನ್ನೆ ರಾತ್ರಿ ಹೊರಟಿದ್ದ ಕೆಎಸ್’ಆರ್’ಟಿಸಿ ಸ್ಲೀಪರ್ ಬಸ್’ನಲ್ಲಿ ಯುವತಿಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಯುವಕನನ್ನು ನೋಡಿ ಬಸ್ ಕಂಡಕ್ಟರ್, ಚಾಲಕ ಸೇರಿದಂತೆ ಪ್ರಯಾಣಿಕರೆಲ್ಲರೂ ತರಾಟೆಗೆ ತೆಗೆದುಕೊಂಡಿದ್ದಾರೆ.


ವಿಜಯಯದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಯುವತಿ ಕೆಎಸ್’ಆರ್’ಟಿಸಿ ಬಸ್ನ ಸೀಟ್ ನಂಬರ್ 3ರಲ್ಲಿ ಇದ್ದರು. ವಿಜಯಪುರದಿಂದ ಮಂಗಳೂರಿಗೆ ಹೊರಟಿದ್ದ ಯುವಕ ರಾಮಪ್ಪ ಎಂಬಾತ ಅದೇ ಬಸ್’ನಲ್ಲಿ ಸೀಟ್ ನಂಬರ್ 28ರಲ್ಲಿ ಪ್ರಯಾಣಿಸುತ್ತಿದ್ದನು. ಬಸ್ ಕಿರೇಸೂರು ಎಂಬ ಬಳಿ ರಾತ್ರಿ ಊಟಕ್ಕೆಂದು ಡಾಬಾದಲ್ಲಿ ನಿಲ್ಲಿಸಿತ್ತು. ಆ ಸಂದರ್ಭದಲ್ಲಿ ರಾಮಪ್ಪ ಎಂಬ ಯುವಕ ತನ್ನ ಸೀಟ್ನಿಂದ ಎದ್ದು ಬಂದು ಯುವತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ.

- Advertisement -


ಏಕಾಏಕಿ ಯುವಕನೊಬ್ಬ ಸೀಟ್’ನ ಬಳಿ ಬಂದು ಮೂತ್ರ ವಿಸರ್ಜನೆ ಮಾಡುತ್ತಿದ್ದಂತೆ ವಿಚಲಿತಳಾದ ಯುವತಿ ದಿಢೀರ್ ಬಸ್ನಿಂದ ಇಳಿದು ಹೊರಗೆ ಬಂದಿದ್ದಾಳೆ. ಡಾಬಾದಲ್ಲಿ ಊಟ ಮಾಡುತ್ತಿದ್ದ ಬಸ್ ಕಂಡಕ್ಟರ್ ಬಳಿ ತೆರಳಿ ಯುವತಿ ಮಾಹಿತಿ ನೀಡಿದ್ದಾಳೆ. ಸಹ ಪ್ರಯಾಣಿಕರ ಕೀಳು ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಕಣ್ಣೀರಿಟ್ಟಿದ್ದಾಳೆ.
ಯುವತಿ ಘಟನೆ ವಿವರಿಸುತ್ತದ್ದಂತೆ ಸಿಟ್ಟಿಗೆದ್ದ ಕಂಡಕ್ಟರ್ ಮತ್ತು ಡ್ರೈವರ್ ಹಾಗೂ ಪ್ರಯಾಣಿಕರು ಯುವಕನನ್ನು ಹೊರ ಕರೆದು ಹಿಗ್ಗಾ ಮುಗ್ಗಾ ಬೈದಿದ್ದಾರೆ. ಯುವಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮದ್ಯಪಾನ ಮಾಡಿರಬಹುದು ಎಂದು ಅನುಮಾನಗೊಂಡಿದ್ದಾರೆ.

Join Whatsapp