ಸಿದ್ದರಾಮಯ್ಯ ಮುಖ್ಯಮಂತ್ರಿ ಆದರೆ ಬೆಂಬಲ ನೀಡುತ್ತೇನೆ: ಜನಾರ್ದನ ರೆಡ್ಡಿ

Prasthutha|

- Advertisement -

ರಾಯಚೂರು: ಸಿದ್ದರಾಮಯ್ಯ ಮುಖ್ಯಮಂತ್ರಿ ಆದರೆ ನಾನು ಅವರಿಗೆ ಬೆಂಬಲ ನೀಡುತ್ತೇನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.

ರಾಯಚೂರಿನ ಲಿಂಗಸುಗೂರಿನಲ್ಲಿ ಕೆಆರ್‍ ಪಿ ಪಕ್ಷದ ಅಭ್ಯರ್ಥಿ ಆರ್.ರುದ್ರಯ್ಯ ಪರ ಪ್ರಚಾರ ವೇಳೆ ಭಾಷಣ ಮಾಡಿದ ಅವರು, ಕೆ.ಆರ್.ಪಿ ಪಕ್ಷದ ಪ್ರಣಾಳಿಕೆಯ ಭರವಸೆಗಳನ್ನು ಒಪ್ಪಿದರೆ ಹಾಗೂ ಅವರು ಮುಖ್ಯಮಂತ್ರಿಯಾಗ್ತಾರೆ ಅಂದ್ರೆ ಅವರಿಗೆ ನಾನು ಸಪೋರ್ಟ್ ಮಾಡ್ತೀನಿ ಎಂದು ಹೇಳಿದ್ದಾರೆ.

- Advertisement -

ಇದೇ ವೇಳೆ ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ನಾಯಕರಿಂದಲೇ ದೇಶದ ರಕ್ಷಣೆಯಾಗುತ್ತೆ ಅನ್ನೋ ರೀತಿ ಮಾತನಾಡುತ್ತಾರೆ. ಬಿಜೆಪಿ ದೊಡ್ಡದೊಡ್ಡ ನಾಯಕರು ದೆಹಲಿಯಿಂದ ಬಂದು ಮಾತನಾಡುತ್ತಿದ್ದಾರೆ. ರಾಜ್ಯಕ್ಕೆ ಡಬಲ್ ಇಂಜಿನ್ ಸರ್ಕಾರ ಬೇಕು ಅಂತ ಹೇಳುತ್ತಿದ್ದಾರೆ. ಅವರಿಗೇನಾದ್ರೂ ಮಾನ, ಮರ್ಯಾದೆ, ನಾಚಿಕೆ ಅನ್ನೋದು ಇದ್ರೆ ಹೇಳಲಿ ಎಂದರು.