ದೇಶದಲ್ಲೇ ವ್ಯಾಸಂಗಕ್ಕೆ ಅವಕಾಶ: ಸಿಎಂಗೆ ಮನವಿ

Prasthutha|

ರಾಯಚೂರು: ಯುದ್ಧಪೀಡಿತ ಉಕ್ರೇನ್‌ ನಿಂದ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳು ಭಾರತದಲ್ಲೇ ವ್ಯಾಸಂಗ ಮಾಡಲು ಅವಕಾಶ ನೀಡುವಂತೆ ಒತ್ತಾಯಿಸಿ ರಾಯಚೂರಿನ 17 ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಡಿಸಿ ಕಚೇರಿಗೆ ಆಗಮಿಸಿ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.

- Advertisement -

ನಾವು ವೈದ್ಯಕೀಯ ವ್ಯಾಸಂಗಕ್ಕೆಂದು ಉಕ್ರೇನ್‌ ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿದ್ದು, ಈಗ ಅಲ್ಲಿ ಯುದ್ಧ ನಡೆಯುತ್ತಿರುವ ಕಾರಣ  ಮರಳಿ ನಮ್ಮ ತಾಯ್ನಾಡಿಗೆ ಬಂದಿದ್ದೇವೆ. ಆದರೆ, ನಮ್ಮ ವ್ಯಾಸಂಗ ಪೂರ್ಣಗೊಂಡಿಲ್ಲ. ಮರಳಿ ಹೋಗಬೇಕೆಂದರೆ ಅಲ್ಲಿನ ಪರಿಸ್ಥಿತಿ ಕೈ ಮೀರಿ ಹೋಗಿದೆ. ಹೀಗಾಗಿ ಭಾರತೀಯ ವೈದ್ಯಕೀಯ ಕಾಲೇಜುಗಳಲ್ಲೇ ನಮಗೆ ಮುಂದಿನ ವ್ಯಾಸಂಗ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

Join Whatsapp