ಬೆಂಗಳೂರು: ಆಪರೇಷನ್ ಹಸ್ತದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಮಾಜಿ ಸಚಿವ ರೇಣುಕಾಚಾರ್ಯ ಭೇಟಿಯಾಗಿದ್ದಾರೆ.
ಸಿಎಂ ನಿವಾಸದಲ್ಲಿ 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಬಳಿಕ ಸದಾಶಿವನಗರದಲ್ಲಿರುವ ಡಿಕೆಶಿ ನಿವಾಸಲ್ಲಿ ಭೇಟಿ ಮಾಡಿ ರೇಣುಕಾಚಾರ್ಯ ಮಾತುಕತೆ ನಡೆಸಿದ್ರು. ರೇಣುಕಾಚಾರ್ಯ ಸಿಎಂ, ಡಿಕೆಶಿಯನ್ನು ಭೇಟಿಯಾಗಿರೋದು ತೀವ್ರ ಕುತೂಹಲ ಮೂಡಿಸಿದೆ.
ಸಿಎಂ, ಡಿಸಿಎಂ ಭೇಟಿ ಬಳಿಕ ಮಾತನಾಡಿದ ರೇಣುಕಾಚಾರ್ಯ, ಹೊನ್ನಾಳಿ ಕ್ಷೇತ್ರದಲ್ಲಿ ಬರ ಪರಿಸ್ಥಿತಿ ಇದೆ. ಆ ಸಂಬಂಧ ಸಿಎಂ ಹಾಗೂ ಡಿಸಿಎಂ ಇಬ್ಬರನ್ನು ಭೇಟಿ ಮಾಡಿದ್ದೇನೆ. ಕ್ಷೇತ್ರದಲ್ಲಿ ಶಾಸಕರು ಇರಬಹುದು. ಆದರೆ ನಾನು 3 ಬಾರಿ ಶಾಸಕನಾಗಿದ್ದ ಕ್ಷೇತ್ರ. ಅದಕ್ಕೆ ಬರ ತಾಲೂಕಿಗೆ ಸೇರಿಸಿ ಎಂದು ಮನವಿ ಮಾಡಿದ್ದೇನೆ ಅಂತ ರೇಣುಕಾಚಾರ್ಯ ಹೇಳಿದರು.