ನೀತಿ ಸಂಹಿತೆ: ಸಿಎಂ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಕಾರು ತಪಾಸಣೆ

Prasthutha|

- Advertisement -

ಕೋಲಾರ: ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಭೈರತಿ ಸುರೇಶ್‌ ಪ್ರಯಾಣಿಸುತ್ತಿದ್ದ ಕಾರನ್ನು ಕೋಲಾರದ ಗಡಿ ರಾಮಸಂದ್ರ ಬಳಿ ತಪಾಸಣೆ ಮಾಡಲಾಗಿದೆ.

ಚೆಕ್‌ ಪೋಸ್ಟ್‌ ನಲ್ಲಿ ಡಿಸಿ ಅಕ್ರಂ ಪಾಷಾ ನೇತೃತ್ವದಲ್ಲಿ ಅಧಿಕಾರಿಗಳು ಕಾರು ತಪಾಸಣೆ ಮಾಡಿದ್ದಾರೆ. ಕೋಲಾರ ಹೊರವಲಯದ ನಂದಿನಿ ಪ್ಯಾಲೇಸ್‌ ನಲ್ಲಿ ನಡೆದ ಮಾಲೂರು ಕಾಂಗ್ರೆಸ್ ಶಾಸಕ ನಂಜೇಗೌಡ ಸಹೋದರ ಮಗಳ ಮದುವೆಗೆ ಹೋಗಿದ್ದ ಸಿಎಂ, ಗೃಹ ಸಚಿವ ಪರಮೇಶ್ವರ್‌ ವಧು-ವರರಿಗೆ ಶುಭಾಶಯ ಕೋರಿದ್ದಾರೆ. ಈ ವೇಳೆ ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಗೌತಮ್‌ ಸೇರಿ ಹಲವು ನಾಯಕರು ಭಾಗಿ ಆಗಿದ್ದರು.



Join Whatsapp