ಮಣಿಪುರ: ಇಲ್ಲಿನ ಸಂಘರ್ಷಕ್ಕೆ ಸಂಬಂಧಿಸಿ ರಾಜ್ಯದಲ್ಲಿ ಅಸ್ಸಾಂ ರೈಫಲ್ಸ್‌ನ ಅಧಿಕಾರಿಗಳು ಮೌಲ್ಯಮಾಪನ ನಡೆಸಿದ್ದು, ಸ್ಫೋಟಕ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಮಣಿಪುರದಲ್ಲಿನ ಸಂಘರ್ಷಕ್ಕೆ ಸಿಎಂ, ಬಿಜೆಪಿ ನಾಯಕ ಬಿರೇನ್ ಸಿಂಗ್ ಉತ್ತೇಜನ ಕಾರಣ ಎಂದು ಅಧಿಕಾರಿಗಳ ವರದಿ ಹೇಳಿದೆ.
ಅಸ್ಸಾಂ ಸಿಎಂ ಬಿರೇನ್ ಸಿಂಗ್ ಅವರ ರಾಜಕೀಯ ನಿರಂಕುಶಾಧಿಕಾರ ಮತ್ತು ಮಹತ್ವಾಕಾಂಕ್ಷೆಯೇ ಹಿಂಸಾಚಾರಕ್ಕೆ ಕಾರಣ ಎಂದು ವರದಿ ಹೇಳಿದೆ.
ಸಿಎಂ ಸಿಂಗ್ ಅವರ ನಿಲುವು ಇತರ ವಿಷಯಗಳ ಜೊತೆಗೆ ಸಂಘರ್ಷಕ್ಕೆ ಕಾರಣವಾಗುವ ಅಂಶಗಳೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ಏಪ್ರೀಲ್‌ನಿಂದ ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ 219 ಮಂದಿ ಮೃತಪಟ್ಟಿದ್ದರು, 60,000 ಮಂದಿ ಸ್ಥಳಾಂತರಗೊಂಡಿದ್ದರು, 1,100 ಮಂದಿ ಗಾಯಗೊಂಡಿದ್ದರು. ಮಹಿಳೆಯರ ಬೆತ್ತಲೆ ಮೆರವಣಿಗೆಯಂತಹ ಆಘಾತಕಾರಿ ಘಟನೆಯೂ ನಡೆದಿತ್ತು.
ರಾಜ್ಯದಲ್ಲಿ ಏಪ್ರಿಲ್ 19 ಮತ್ತು ಏಪ್ರಿಲ್ 26ರಂದು ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಆದರೆ ಈಗಾಗಲೇ ಕುಕಿ ಸಂಘಟನೆ ಮಣಿಪುರದಲ್ಲಿ ಮತದಾನವನ್ನು ಬಹಿಷ್ಕರಿಸಿದೆ.