ಸರ್ಕಾರದಿಂದ ಆಯ್ಕೆಯಾದ 10,168 ಹಜ್ ಯಾತ್ರಾರ್ಥಿಗಳಿಗೆ ಸಿಎಂ ಬೀಳ್ಕೊಡುಗೆ

Prasthutha|

ಬೆಂಗಳೂರು: ರಾಜ್ಯ ಸರ್ಕಾರದ ಸಹಾಯಧನದೊಂದಿಗೆ ಹಜ್ ಯಾತ್ರೆಗೆ ಹೋಗಲು 10,168 ಜನರನ್ನು ಆಯ್ಕೆ ಮಾಡಲಾಗಿದ್ದು, ಹಜ್ ಯಾತ್ರೆಗೆ ಹೊರಟ ಎಲ್ಲ ಯಾತ್ರಾರ್ಥಿಗಳಿಗೆ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಸಿರು ನಿಶಾನೆ ತೋರಿಸಿ ಬೀಳ್ಕೊಡುಗೆ ನೀಡಿದ್ದಾರೆ. ಸುಗಮವಾಗಿ ಹಜ್ ಯಾತ್ರೆ ಮುಗಿಸಿ ಬರಲು ಹಾರೈಸಿದ್ದಾರೆ.

- Advertisement -

ಬೆಂಗಳೂರಿನ ಹೆಗಡೆನಗರದ ಹಜ್ ಭವನದಲ್ಲಿ ಈ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. 10,168 ಜನ ಯಾತ್ರಾತ್ರಿಗಳನ್ನು ಹೊತ್ತು ಸಾಗುತ್ತಿದ್ದ ಬಸ್‌ಗಳಿಗೆ ಸಿಎಂ ಹಸಿರು ನಿಶಾನೆ ತೋರಿಸಿ ಬೀಳ್ಕೊಟ್ಟರು. ಸಚಿವರಾದ ಝಮೀರ್ ಅಹಮದ್ ಖಾನ್, ರಹೀಂ ಖಾನ್ ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹಮದ್ ಸೇರಿದಂತೆ‌ ಮುಸ್ಲಿಂ ಮುಖಂಡರು ಭಾಗಿಯಾಗಿದ್ದರು.

ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಪ್ರತಿ ವರ್ಷ ಹಜ್ ಯಾತ್ರೆಗೆ ಹೋಗುವವರಿಗೆ ಬಿಳ್ಕೊಡುಗೆ ಕೊಡ್ತೇವೆ. ಈ ಹಿಂದೆ ನಾನು ಮುಖ್ಯಮಂತ್ರಿ ಆಗಿದ್ದಾಗಲೂ ಬಿಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಕಳೆದ ವರ್ಷವೂ ಬಂದಿದ್ದೆ, ಈ ವರ್ಷವೂ ಬಂದಿದ್ದೀನಿ. ಹಜ್ ಯಾತ್ರಿಗಳಿಗೆ ಪ್ರಯಾಣ ಸುಖಕರವಾಗಿರಲಿ ಅಂತ ಹಾರೈಸುತ್ತೇನೆ. ಈ ವರ್ಷ 10,168 ಜನ ಯಾತ್ರಿಗಳು ಹಜ್‌ಗೆ ಹೋಗ್ತಾ ಇದ್ದಾರೆ. ಅವರೆಲ್ಲರೂ ಪ್ರಾರ್ಥನೆ ಮಾಡಲಿ, ಆರೋಗ್ಯವಾಗಿ ಬರಲಿ. ಸಮಾಜದಲ್ಲಿ ಸಾಮರಸ್ಯ, ಸೌಹಾರ್ದತೆ, ನೆಲೆಸಲಿ ಅಂತ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.



Join Whatsapp