ನೂತನ ಸಿಎಂ ಆಯ್ಕೆಗೆ ಜೈಪುರದಲ್ಲಿ ಸಿಎಲ್ ಪಿ ಸಭೆ

ನವದೆಹಲಿ: ರಾಜಸ್ತಾನದ ನೂತನ ಮುಖ್ಯಮಂತ್ರಿ ಆಯ್ಕೆಗೆ ಕಸರತ್ತು ಆರಂಭವಾಗಿದ್ದು, ಇಂದು ಸಂಜೆ ಜೈಪುರದಲ್ಲಿ ಮಹತ್ವದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.


ಹಾಲಿ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಒಬ್ಬರಿಗೆ ಒಂದೇ ಹುದ್ದೆ ಸೂತ್ರದಂತೆ ಗೆಲ್ಹೋಟ್ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ. ಹೀಗಾಗಿ, ಅವರ ಉತ್ತರಾಧಿಕಾರಿ ಪಟ್ಟ ಅಲಂಕರಿಸಲು ರಾಜಸ್ತಾನ ಕಾಂಗ್ರೆಸ್ ನಲ್ಲಿ ತೀವ್ರ ಪೈಪೋಟಿ ಕಂಡು ಬಂದಿದೆ.

- Advertisement -


ಮುಖ್ಯಮಂತ್ರಿ ಹುದ್ದೆ ಅಲಂಕರಿಸಲು ಸಚಿನ್ ಪೈಲಟ್ ಮುಂಚೂಣಿಯಲ್ಲಿದ್ದಾರೆ. ಮೂಲಗಳ ಪ್ರಕಾರ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಯಲ್ಲಿ ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಅಧಿಕಾರವನ್ನು ಸೋನಿಯಾಗಾಂಧಿ ಅವರಿಗೆ ನೀಡಲು ಮುಂದಾಗಿದೆ.


ಮತ್ತೊಂದೆಡೆ ಅಶೋಕ್ ಗೆಲ್ಹೋಟ್ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮುಂದುವರೆಸುವಂತೆ ಗೆಲ್ಹೋಟ್ ಬೆಂಬಲಿಗರು ಒತ್ತಾಯಿಸಿದ್ದಾರೆ.
ಸೋನಿಯಾಗಾಂಧಿ ಅವರು ನೂತನ ಆಯ್ಕೆ ಕುರಿತಂತೆ ವೀಕ್ಷಕರನ್ನಾಗಿ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕೇನ್ ಅವರನ್ನು ಸೋನಿಯಾ ನೇಮಕ ಮಾಡಿದ್ದಾರೆ.