ಮಂಗಳೂರು: ಇತ್ತೀಚೆಗೆ ಮಂಗಳೂರಿನ ನಂತೂರು ಬಳಿ ರಸ್ತೆ ಗುಂಡಿಯನ್ನು ತಪ್ಪಿಸಲು ಹೋಗಿ ಅಪಘಾತಕ್ಕೆ ಒಳಪಟ್ಟು ಅಸುನೀಗಿದ ತರುಣ ಆತಿಷ್ ಮನೆಗೆ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ ನೇತೃತ್ವದ ನಿಯೋಗ ತೆರಳಿ ಮನೆಯವರಿಗೆ ಸಾಂತ್ವನ ಹೇಳಿತು. ಆತಿಷ್ ತಂದೆ ಯಶವಂತ ಉಪಸ್ಥಿತರಿದ್ದರು.
“ಇಂತಹ ಅನಾಹುತಗಳಿಗೆ ಕಾರಣರಾದವರನ್ನು ಶಿಕ್ಷಿಸಬೇಕು. ಇನ್ನು ಮುಂದೆ ಈ ರೀತಿಯ ಬೇಜವಾಬ್ದಾರಿ ಕೆಲಸಗಳು ಆಗಬಾರದು. ಪ್ರತಿಯೊಬ್ಬ ನಾಗರಿಕರು ಜಾಗೃತರಾಗಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ವ್ಯವಸ್ಥೆ ಸರಿಯಾಗುವ ತನಕ ವಿಶ್ರಮಿಸಕೂಡದು” ಎಂದು ಅವರು ಹೇಳಿದರು.
ಬಳಿಕ ಅವರು ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿದರು. ಆತಿಶ್ ಗೆಳೆಯ ರಿತ್ವಿಕ್ ರೈ ಆ ಸಮಯದಲ್ಲಿ ಉಪಸ್ಥಿತರಿದ್ದು ಅಪಘಾತದ ವಿವರಗಳನ್ನು ನೀಡಿದರು. ತನ್ನ ಗೆಳೆಯ ಸಾಯಲು ರಸ್ತೆ ಗುಂಡಿಯೇ ಕಾರಣ, ಇನ್ಯಾರಿಗೂ ಹೀಗೆ ಆಗಬಾರದು. ಅದಕ್ಕಾಗಿ ನಾನು ಹೊರಾಡುತ್ತಿದ್ದೇನೆ ಎಂದು ಅವರು ಹೇಳಿದರು.
ಆಮ್ ಆದ್ಮಿ ಪಾರ್ಟಿಯ ದ.ಕ ಪ್ರದಾನ ಕಾರ್ಯದರ್ಶಿ ವೇಣುಗೋಪಾಲ್ ಪುಚ್ಚೂಪಾಡಿ, ಖಜಾಂಚಿ ಎವ್ರನ್ ಡಿಸೋಜಾ, ಸಹ ಕಾರ್ಯದರ್ಶಿ ದಿಲೀಪ್ ಲೋಬೊ, ಡೆಸ್ಮಂಡ್ ಡಿಸೋಜಾ ರವಿಪ್ರಸಾದ, ಶಾನನ್ ಪಿಂಟೋ, ಬೆನೆಟ್, ನವೀನ್ ಡಿಸೋಜ, ಜೇಮ್ಸ್ ಹಾಗೂ ಇತರರು ಉಪಸ್ಥಿತರಿದ್ದರು.