ನವದೆಹಲಿ: ಉಕ್ರೇನಿನಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಸೂಮೀ ಇಲ್ಲವೇ ಸುಮೈ ನಗರದಿಂದ ಭಾರತೀಯರನ್ನು ಕರೆತರಲು ಸರಿಯಾದ ಕಾರಿಡಾರ್ ಯಾವುದೂ ಕಂಡುಬರುತ್ತಿಲ್ಲ ಇಲ್ಲಿರುವ ಭಾರತೀಯ ಮತ್ತಿತರ ವಿದ್ಯಾರ್ಥಿಗಳನ್ನು ಕರೆತರಲು ಬೇಕಾದ ಸುರಕ್ಷಾ ಮಾರ್ಗ ರಷ್ಯಾ ಮತ್ತು ಉಕ್ರೇನಿನ ಮಾತಿನ ಮಟ್ಟದಲ್ಲೇ ಇದೆ.
ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಆಗಿರುವ ಟಿ.ಎಸ್.ತಿರುಮೂರ್ತಿಯವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಾತನಾಡುತ್ತ ಉಕ್ರೇನಿನಲ್ಲಿನ ಮಾನವೀಯ ಸ್ಥಿತಿಯ ಬಗ್ಗೆ ಮಾತನಾಡುತ್ತ ಅಲ್ಲಿ ಯಾವ ಮಾನವೀಯ ಕಾರಿಡಾರ್ ಕೂಡ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಉಕ್ರೇನಲ್ಲಿರುವ ಭಾರತೀಯರು ಮತ್ತಿತರನ್ನು ಸುರಕ್ಷಿತವಾಗಿ ಅಲ್ಲಿಂದ ಹೊರಗೆ ಬರುವಂತೆ ದಾರಿ ಮಾಡಿ ಕೊಡಬೇಕು ಎಂದು ಭಾರತ ಮತ್ತೆ ಮತ್ತೆ ಮನವಿ ಮಾಡಿಕೊಂಡಿದೆ.
“ನಾವು ಮತ್ತೆ ಮತ್ತೆ ಮನವಿ ಮಾಡಿದ ಬಳಿಕವೂ ಸುಮೈನಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಹೊರಬರಲು ಸೇಫ್ ಕಾರಿಡಾರ್ ಸಾಧ್ಯವಾಗಿಲ್ಲ ಎಂಬುದು ವಿಷಾದನೀಯ” ಎಂದು ತಿರುಮೂರ್ತಿ ಹೇಳಿದರು. ಉಕ್ರೇನಿನಿಂದ 20,000 ಭಾರತೀಯರನ್ನು ಸುರಕ್ಷಿತಾಗಿ ಕರೆತರುವಲ್ಲಿ ಭಾರತ ಯಶಸ್ವಿ ಆಗುತ್ತದೆ ಎಂದೂ ಅವರು ಹೇಳಿದರು.
ಇತರ ದೇಶಗಳಿಗೂ ಸಾಧ್ಯವಾಗುವಲ್ಲಿ ನಾವು ಸಹಾಯ ಮಾಡಿದ್ದೇವೆ. ಮುಂದಿನ ದಿನಗಳಲ್ಲೂ ಅದನ್ನು ಮುಂದುವರಿಸುತ್ತೇವೆ ಎಂದು ಅವರು ಹೇಳಿದರು.
ಭಾರತೀಯರನ್ನು ಕರೆತರಲು ಈಗಾಗಲೇ 80 ವಿಮಾನ ಯಾನಗಳು ನಡೆದಿವೆ. ಈ ನಿಟ್ಟಿನಲ್ಲಿ ಆ ಸುತ್ತಿನ ದೇಶಗಳ ಜೊತೆ ನಾವು ಸುಗಮ ಸಂಬಂಧ ಇಟ್ಟುಕೊಳ್ಳಲು ಬಯಸಿದ್ದೇವೆ.