ಫುಜೇರಾ : ಯುಎಇಯ ಔಟ್ ಲೆಟ್ ಒಂದರ ಕೆಲಸದಾತ ತರಕಾರಿ ಮತ್ತು ಹಣ್ಣುಗಳನ್ನು ಕತ್ತರಿಸುವ ಚೂರಿಯಲ್ಲೇ ತನ್ನ ಉಗುರು ಸ್ವಚ್ಛ ಮಾಡುತ್ತಿದ್ದ ವೀಡಿಯೊವೊಂದು ವೈರಲ್ ಆದ ಹಿನ್ನೆಲೆಯಲ್ಲಿ, ಆ ಔಟ್ ಲೆಟ್ ಅನ್ನು ಯುಎಇಯ ಫುಜೇರಾ ಮುನ್ಸಿಪಾಲಿಟಿ ಮುಚ್ಚಿ ಆದೇಶಿಸಿದೆ. ಔಟ್ ಲೆಟ್ ಸಿಬ್ಬಂದಿಗೆ ಮುನ್ಸಿಪಾಲಿಟಿ ಭಾರೀ ಮೊತ್ತದ ದಂಡ ವಿಧಿಸಿದೆ ಮತ್ತು ಅಮಾನತುಗೊಳಿಸಿದೆ.
ಎಮಿರೇಟ್ ನ ಟ್ರೆಡಿಶನಲ್ ಮಾರ್ಕೆಟ್ ನಲ್ಲಿದ್ದ ಔಟ್ ಲೆಟ್ ನಲ್ಲಿ ಈ ಘಟನೆ ನಡೆದಿದೆ. ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ, ಪರಿಶೀಲನಾ ತಂಡ ಔಟ್ ಲೆಟ್ ಗೆ ಭೇಟಿ ನೀಡಿ, ಪರೀಕ್ಷಿಸಿದೆ ಎಂದು ಫುಜೇರಾ ಮುನ್ಸಿಪಾಲಿಟಿಯ ನಿರ್ದೇಶಕ ಮುಹಮ್ಮದ್ ಸೈಫ್ ಅಲ್ ಅಫ್ಖಾಮ್ ಹೇಳಿದ್ದಾರೆ.
ಅಂಗಡಿಯನ್ನು ತಕ್ಷಣವೇ ಮುಚ್ಚಲಾಗಿದೆ. ಸಿಬ್ಬಂದಿಯ ಮೇಲೆ ಭಾರೀ ದಂಡ ವಿಧಿಸಲಾಗಿದೆ ಮತ್ತು ಅಮಾನತುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.