10ನೇ ತರಗತಿ ಬಾಲಕನಿಂದ ಗರ್ಭಿಣಿಯಾದ 11ನೇ ತರಗತಿಯ ವಿದ್ಯಾರ್ಥಿನಿ

Prasthutha|

►ಕಾಲೇಜು ಕ್ಯಾಂಪಸ್‌ನಲ್ಲೇ ಮಗು ಜನನ

- Advertisement -

ಚೆನ್ನೈ: 10ನೇ ತರಗತಿಯ ಬಾಲಕನಿಂದ ಗರ್ಭಿಣಿಯಾದ 11ನೇ ತರಗತಿಯ ವಿದ್ಯಾರ್ಥಿನಿಯು, ಜನನವಾದ ಬಳಿಕ ಮಗುವನ್ನು ಶಾಲೆಯ ಪಕ್ಕದ ಆವರಣ ಗೋಡೆಯ ಬಳಿ ಉಪೇಕ್ಷಿಸಿದ ಘಟನೆ ತಮಿಳು ನಾಡಿನ ಕಡಲೂರು ಜಿಲ್ಲೆಯ ಭುವನಗಿರಿಯಲ್ಲಿ‌ ನಡೆದಿದೆ.

ಶಾಲಾ ಆವರಣದ ಬಳಿ ನವಜಾತ ಶಿಶುವನ್ನು ನೋಡಿದ ವಿದ್ಯಾರ್ಥಿನಿಯೋರ್ವಳು ಶಿಕ್ಷಕರಿಗೆ ವಿಷಯ ತಿಳಿಸಿದ್ದು, ಆ ಮೂಲಕ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

- Advertisement -

ಶಿಶುವಿನ ಹೊಕ್ಕುಳ ಬಳ್ಳಿ ಸರಿಯಾದ ರೀತಿಯಲ್ಲಿ ತುಂಡರಿಸಿರದ ಕಾರಣ ಶಾಲಾ ವಿದ್ಯಾರ್ಥಿನಿಗಳ ಪೈಕಿ ಯಾರೋ ಈ ಕೃತ್ಯ ನಡೆಸಿರಬಹುದೆಂದು ಪೊಲೀಸರು ಪ್ರಾಥಮಿಕ ಊಹೆಗೆ ಬಂದಿದ್ದರು. ಈ ನಿಟ್ಟಿನಲ್ಲಿ ತನಿಖೆ ನಡೆಸಿದಾಗ ಅದೇ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಶಾಲೆಯ ಶೌಚಾಲಯದಲ್ಲಿ ಗಂಡು ಮಗುವಿಗೆ ಜನನ ನೀಡಿದ್ದು, ಬಳಿಕ ಆವರಣ ಗೋಡೆಯ ಉಪೇಕ್ಷಿಸಿ ಹೋದ ಆತಂಕಕಾರಿ ಮಾಹಿತಿ‌ ತಿಳಿದು ಬಂದಿದೆ.

ಮತ್ತೊಂದು ಶಾಲೆಯ ಹತ್ತನೇ ತರಗತಿಯ ಬಾಲಕ ವಿದ್ಯಾರ್ಥಿನಿ ಗರ್ಭಿಣಿಯಾಗಲು ಕಾರಣ ಎಂದು ತಿಳಿದು ಬಂದಿದ್ದು, ಆತನ ವಿರುದ್ಧ ಪೊಕ್ಸೊ ಮತ್ತಿತರ ಕಲಂ ಅಡಿ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp