ಕೋಲ್ಕತಾ : ಕೋಲ್ಕತಾದ ಎಕ್ಬಲ್ ಪುರ ಪ್ರದೇಶದಲ್ಲಿ ಅಕ್ಟೋಬರ್ 8-9 ರಂದು ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆಯ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಎಫ್ ಐಆರ್ ದಾಖಲಿಸಿದೆ
ಭಯೋತ್ಪಾದನಾ ನಿಗ್ರಹ ಸಂಸ್ಥೆ ಬುಧವಾರದಿಂದ ಘರ್ಷಣೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸುವ ಸಾಧ್ಯತೆಯಿದ್ದು, ದೂರಿನ ಪ್ರತಿಯನ್ನು ನಗರದ ಬ್ಯಾಂಕ್ ಶಾಲ್ ನ್ಯಾಯಾಲಯದಲ್ಲಿ ಸಲ್ಲಿಸಬಹುದು ಎಂದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನಿಖೆಯನ್ನು ಕೈಗೆತ್ತಿಕೊಂಡಿರುವ ಎನ್ ಐಎ ಮಂಗಳವಾರ ಎಫ್ ಐಆರ್ ದಾಖಲಿಸಿದೆ.
ಕೋಲ್ಕತಾ ಪೊಲೀಸರಿಂದ ಬಂಧಿಸಲ್ಪಟ್ಟವರನ್ನು ವಶಕ್ಕೆ ಪಡೆಯಲು ನಾವು ಕೋರಲಿದ್ದೇವೆ ಹಾಗೂ ಆ ಪ್ರದೇಶದ ಸಿಸಿಟಿವಿಯ ವೀಡಿಯೊ ತುಣುಕನ್ನು ಪರಿಶೀಲಿಸಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕೋಲ್ಕತಾದ ಎಕ್ಬಲ್ ಪುರ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಹಲವಾರು ಜನರು ಗಾಯಗೊಂಡಿದ್ದರು. ಹಾಗೂ ಘರ್ಷಣೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಇಲ್ಲಿಯವರೆಗೆ 45 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿತ್ತು.