ನೀಲಿ ಶಾಲು-ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳ ನಡುವೆ ತಿಕ್ಕಾಟ: ತರಗತಿಗೆ ರಜೆ ಘೋಷಣೆ

Prasthutha|

ಚಿಕ್ಕಮಗಳೂರು: ಇಲ್ಲಿನ ಐಡಿಎಸ್ಸಿ ಕಾಲೇಜಿನಲ್ಲಿ ಹಿಜಾಬ್ ಗೆ ಬೆಂಬಲ ವ್ಯಕ್ತಪಡಿಸಿ ವಿದ್ಯಾರ್ಥಿಗಳು ನೀಲಿ ಶಾಲು ಧರಿಸಿ ಕಾಲೇಜಿಗೆ ಬಂದಾಗ ಎಬಿವಿಪಿ ಕಾರ್ಯಕರ್ತರು ಮುಖಾಮುಖಿಯಾದಾಗ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

- Advertisement -

ಇದೇ ವೇಳೆ ನೀಲಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳ ಎದುರು ಕೇಸರಿ ಶಾಲಿನೊಂದಿಗೆ ಬಂದ ವಿದ್ಯಾರ್ಥಿಗಳ ಗುಂಪು ಜೈಶ್ರೀರಾಮ್ ಘೋಷಣೆ ಕೂಗಿದ್ದು, ಈ ವೇಳೆ ನೀಲಿ ಶಾಲು ಧರಿಸಿದ ವಿದ್ಯಾರ್ಥಿಗಳು ಜೈ ಭೀಮ್ ಘೋಷಣೆ ಕೂಗಿದ್ದಾರೆ. ಸ್ಥಳದಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಬಳಿಕ ಕಾಲೇಜು ಪ್ರಾಂಶುಪಾಲರು ತರಗತಿಗಳಿಗೆ ರಜೆ ಘೋಷಿಸಿದರು.



Join Whatsapp