ಮಂಗಳೂರು: ಕ್ರೈಸ್ತರ ಪ್ರಾರ್ಥನಾ ಮಂದಿರ ಧ್ವಂಸ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಮಂಗಳೂರಿನ 3ನೇ JMFC ನ್ಯಾಯಾಲಯ ಕೇವಲ ಎರಡೇ ದಿನದಲ್ಲಿ ಜಾಮೀನು ಮಂಜೂರು ಮಾಡಿದೆ.
ಕೂಳೂರು ಸಮೀಪದ ಪಂಜಿನಮೊಗರು – ಉರುಂದಾಡಿ ಗುಡ್ಡೆಯಲ್ಲಿ ಕ್ರೈಸ್ತರ ಪ್ರಾರ್ಥನಾ ಮಂದಿರ ದ್ವಂಸಗೈದ ಬಜಪೆ ನಿವಾಸಿ ಲತೀಶ್ (25) , ಕಾವೂರು ಉರುಂದಾಡಿ ನಿವಾಸಿ ಧನಂಜಯ (36) ಬಂಧಿತರಾಗಿದ್ದರು.
ಕಾವೂರು ಠಾಣಾ ಪೊಲೀಸರು ದಿನಾಂಕ 21-02-2022 ರಂದು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂತರ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳ ಜಾಮೀನು ಅರ್ಜಿ ಸ್ವೀಕರಿಸಿದ ಮಂಗಳೂರಿನ 3 ನೇ JMFC ನ್ಯಾಯಾಲಯ ಶರತ್ತುಬದ್ದ ಜಾಮೀನು ಮಂಜೂರು ಮಾಡಿದೆ,
ಆರೋಪಿಗಳ ಪರವಾಗಿ ಮಂಗಳೂರಿನ ವಕೀಲರಾದ ಶ್ರೇಯಸ್.ಎಸ್.ಕೆ ,ಮತ್ತು ಹರ್ಷಿತ್ .ಎ.ಎಸ್ ಅವರು ವಾದಿಸಿದರು