ಮಂಗಳೂರು: ಮಣಿಪುರದಲ್ಲಿ ನಡೆದ ಹಿಂಸಾಚಾರ ಹಾಗೂ ಯುವತಿಯರ ನಗ್ನ ಮೆರವಣಿಗೆ ಹಾಗೂ ಸಾಮೂಹಿಕ ಅತ್ಯಾಚಾರ ಖಂಡಿಸಿ ಮಂಗಳೂರಿನ ಪುರಭವನ ಎದುರು ಕ್ರೈಸ್ತರು ಹಾಗೂ ಸಮಾನ ಮನಸ್ಕರಿಂದ ಬೃಹತ್ ಪ್ರತಿಭಟನೆ ನಡೆಯಿತು.
ಮಣಿಪುರ ಸರಕಾರದ ನಿರ್ಲಕ್ಷ್ಯ ಹಾಗೂ ಕೇಂದ್ರ ಸರಕಾರದ ಮೌನದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು. ಮಳೆಯ ನಡುವೆಯೂ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಕೇಂದ್ರ ಮತ್ತು ಮಣಿಪುರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕೆಥೊಲಿಕ್ ಸಭಾ ಸಂಘಟನೆ ಪ್ರತಿಭಟನೆಯ ನೇತೃತ್ವ ವಹಿಸಿತ್ತು. ಕಥೊಲಿಕ್ ಸಭಾದ ಅಧ್ಯಕ್ಷ ಆಲ್ವಿನ್, ರಾಯ್ ಕ್ಯಾಸ್ತಲಿನೊ, ಸ್ಟ್ಯಾನಿ ಪಿರೇರಾ, ಮುಸ್ಲಿಮ್ ಧರ್ಮ ಗುರು ಎಸ್.ಬಿ ದಾರಿಮಿ ಸೇರಿದಂತೆ ವಿವಿಧ ಮುಖಂಡರು ಪ್ರತಿಭಟನಾ ಭಾಷಣ ಮಾಡಿದರು.