ಡೆಹ್ರಾಡೂನ್: ಮನೆಯೊಂದಲ್ಲಿ ನಡೆಯುತ್ತಿದ್ದ ಕ್ರೈಸ್ತ ಪ್ರಾರ್ಥನಾ ಸಭೆಗೆ ಸಂಘ ಪರಿವಾರದ ಕಾರ್ಯಕರ್ತರು ದಾಳಿ ಮಾಡಿ ಏಳು ಮಂದಿಯ ಮೇಲೆ ಹಲ್ಲೆ ನಡೆಸಿದ ಘಟನೆ ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ನಡೆದಿದೆ.
ಏಳು ಮಂದಿಯ ಮೇಲೆ ಹಲ್ಲೆ ನಡೆಸಿ ಪ್ರಾರ್ಥನಾ ಕೊಠಡಿ ಹಾಗೂ ಮನೆಯ ಬೆಡ್ರೂಂನಲ್ಲಿ ದಾಂಧಲೆ ನಡೆಸಿದ್ದಾರೆ.
ಈ ಪ್ರಾರ್ಥನಾ ಸಭೆ ದೀಕ್ಷಾ ಪೌಲ್ ಎಂಬವರ ಮನೆಯಲ್ಲಿ ನಡೆಯುತ್ತಿತ್ತು. ದೀಕ್ಷಾ ಅವರ ಪತಿ ರಾಜೀಶ್ ಭೂಮಿ ಪ್ಯಾಸ್ಟರ್ ಆಗಿದ್ದು ಹರಿದ್ವಾರ್ ನಲ್ಲಿ ಹೋಟೆಲ್ ನಡೆಸುತ್ತಿದ್ದಾರೆ.
ತಮ್ಮ ಮನೆ ಮೇಲೆ ದಾಳಿ ನಡೆಸಿದ ಗುಂಪಿನ ನೇತೃತ್ವವನ್ನು ದೇವೇಂದ್ರ ದೋಭಲ್ ವಹಿಸಿದ್ದ ಎಂದು ದೀಕ್ಷಾ ಆರೋಪಿಸಿದ್ದಾರೆ. ಈ ವ್ಯಕ್ತಿ ಆರೆಸ್ಸೆಸ್ ಸದಸ್ಯನಾಗಿದ್ದಾನೆ.
ಘಟನೆ ಸಂಬಂಧ ನೆಹ್ರೂ ಕಾಲನಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
Uttarakhand: Hindutva mob attacks Christian prayer meet in Dehradun. A group of Hindutva 'activists' barged into the house and assaulted people including women present inside, Forcefully entered inside the house and vandalised a Christian cross, prayer room and bedroom, made… pic.twitter.com/BLD7vbXp2Y
— Mohammed Zubair (@zoo_bear) July 16, 2024