ಮತಾಂತರ ನಿಷೇಧ ಕಾಯಿದೆ ವಿರೋಧಿಸಿ ಗೃಹ ಸಚಿವರನ್ನು ಭೇಟಿಯಾದ ಕ್ರೈಸ್ತ ಮುಖಂಡರು

Prasthutha|

ಬೆಂಗಳೂರು : ಕ್ರೈಸ್ತ ಸಮುದಾಯದ ಮುಖಂಡರು ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು, ಭೇಟಿಯಾಗಿ ಮತಾಂತರ ನಿಷೇಧ ಕಾಯಿದೆ ತರುವ ಸಂಬಂಧ, ಸಚಿವರ ಜತೆ ಚರ್ಚಿಸಿ, ಮನವಿ ಸಲ್ಲಿಸಿದರು.

- Advertisement -


ರಾಜ್ಯದಲ್ಲಿ ಚುನಾಯಿತ ಸರ್ಕಾರವಿದ್ದಾಗ ಗೂಂಡಾಪಡೆಗಳು ಚರ್ಚ್ ಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ. ಇಂತಹ ಕೃತ್ಯಗಳ ವಿರುದ್ಧ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು. ಈ ಸಂಬಂಧ ಎಲ್ಲಾ ಠಾಣೆಗಳಿಗೆ ಸೂಚನೆ ನೀಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.


ಪ್ರಸ್ತಾವಿತ ಮತಾಂತರ ನಿಷೇಧ ಕಾಯಿದೆ ಯಾವುದೇ ಒಂದು ನಿರ್ದಿಷ್ಟ ಸಮುದಾಯ ವನ್ನು ಗುರಿಯಾಗಿಸಿಕೊಂಡು ಮಾಡದೆ ಸಮಗ್ರ ಸಾಮಾಜಿಕ ಹಿತಾಸಕ್ತಿ ಹಾಗೂ ಎಲ್ಲಾ ಧರ್ಮೀಯರೂ, ತಮ್ಮ ತಮ್ಮ ಧರ್ಮವನ್ನು ಶಾಂತಿ ಹಾಗೂ ಸಹ ಬಾಳ್ವೆ ಯಿಂದ ಆಚರಿಸಲು ಪೂರಕವಾಗಿರಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

- Advertisement -

ಗೃಹ ಸಚಿವರಿಗೆ ಧನ್ಯವಾದ ಅರ್ಪಿಸಿದ ಮುಖಂಡರು, ಬಲವಂತವಾಗಿ ಮಾಡಲಾಗುವ ಮತಾಂತರ ಪ್ರಕ್ರಿಯೆಗೆ ತಮ್ಮದೂ ವಿರೋಧವಿದೆ, ಎಂದೂ ಸಚಿವರಿಗೆ ತಿಳಿಸಿದರು.

Join Whatsapp