ಚೋಳ ರಾಜ ಹಿಂದೂ ಅಲ್ಲ: ವೆಟ್ರಿಮಾರನ್ ಹೇಳಿಕೆಯನ್ನು ಬೆಂಬಲಿಸಿದ ಕಮಲ್ ಹಾಸನ್

Prasthutha|

ಚೆನ್ನೈ: ಚೋಳ ರಾಜ ಹಿಂದೂ ಅಲ್ಲ ಎಂದು ಜನಪ್ರಿಯ ನಟ ಕಮಲ್ ಹಾಸನ್ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸದ್ಯ ತಮಿಳಿಗರು ಹಿಂದುಗಳಲ್ಲ ಹ್ಯಾಷ್ ಟ್ಯಾಗ್ ಟ್ವಿಟರ್ನಲ್ಲಿ ಟ್ರೆಂಡ್ ಆಗುತ್ತಿದೆ.

- Advertisement -

ತಮಿಳಿನ ಜನಪ್ರಿಯ ನಿರ್ದೇಶಕ ವೆಟ್ರಿಮಾರನ್ ಪೊನ್ನಿಯಿನ್ ಸೆಲ್ವನ್ ಚಿತ್ರ ವೀಕ್ಷಿಸಿ ಚೋಳ ರಾಜ ಹಿಂದೂವಾಗಿರಲಿಲ್ಲ ಎಂಬ ಹೇಳಿಕೆ ನೀಡಿದ್ದರು.

ಅದಕ್ಕೆ ಸಹಮತಿ ಸೂಚಿಸಿರುವ  ಕಮಲ್ ಹಾಸನ್, ಚೋಳ ಸಾಮ್ರಾಜ್ಯದ ಕಾಲದಲ್ಲಿ ಹಿಂದೂ ಎಂಬ ಪದವೇ ಇರಲಿಲ್ಲ.  ರಾಜ ರಾಜ ಚೋಳರ ಅವಧಿಯಲ್ಲಿ ಹಿಂದೂ ಧರ್ಮ ಇರಲಿಲ್ಲ. ವೈನವಂ, ಶಿವಂ ಮತ್ತು ಸಮನಂ ಎಂದಿದ್ದವು. ಬ್ರಿಟಿಷರಿಗೆ ಇವುಗಳನ್ನು ಹೇಗೆ ಕರೆಯಬೇಕೆಂದು ಗೊತ್ತಾಗದ ಕಾರಣ ಇವುಗಳನ್ನು ಒಟ್ಟಾಗಿ ಹಿಂದೂ ಎಂದು ಕರೆದರು. ಇದು ತೂತುಕುಡಿ ಪದವು ಟ್ಯುಟಿಕಾರ್ನ್ ಆಗಿ ಬದಲಾದಂತೆಯೇ ಆಯಿತು ಎಂದು ಹೇಳಿದ್ದಾರೆ.

- Advertisement -

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಹಿಂದುಗಳ ಒಂದು ಗುಂಪು #TamilsAreNotHindus ಅನ್ನು ಟ್ರೆಂಡ್ ಮಾಡುತ್ತಿದೆ.

ವೆಟ್ರಿಮಾರನ್ ಮತ್ತು ಕಮಲ್ ಹಾಸನ್ ಹೇಳಿಕೆ ಬಿಜೆಪಿಯನ್ನು ಕೆರಳಿಸಿದ್ದು, ಯಾವ ಮಸೀದಿ ಅಥವಾ ಚರ್ಚ್ ಗಳು ಚೋಳರ ಕಾಲದಲ್ಲಿ ನಿರ್ಮಾಣಗೊಂಡಿತ್ತು? ಎಂದು ಬಿಜೆಪಿ ಮುಖಂಡ ಎಚ್.ರಾಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೀಗ ಈ ಹೇಳಿಕೆ ವಿವಾದದ ಸ್ವರೂಪ ಪಡೆದಿದ್ದು, ಟ್ವಿಟರ್ ನಲ್ಲಿ ಕಮಲ್ ಹಾಸನ್ ಪರ ಮತ್ತು ವಿರೋಧದ ನಿಲುವುಗಳು ವ್ಯಕ್ತವಾಗುತ್ತಿವೆ.



Join Whatsapp