ಚಿತ್ರದುರ್ಗ: ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (SDTU) ಮಹಿಳಾ ಟೈಲರ್ ಯೂನಿಯನ್ ಇದರ ಚಿತ್ರದುರ್ಗ ನಗರದ ನೂತನ ಸಮಿತಿಯನ್ನು ಇಂದು ರಚಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಶರೀಫ್ ಪಾಂಡೇಶ್ವರ್ ಮಾತನಾಡಿ ಚುನಾವಣೆ ಹತ್ತಿರ ಬಂದಾಗ ಕಾರ್ಮಿಕರಿಗೆ ಸುಳ್ಳು ಭರವಸೆ ನೀಡುವ ಮೂಲಕ ನಿಮ್ಮ ಮತವನ್ನು ಭ್ರಷ್ಟ ರಾಜಕಾರಣಿಗಳ ಪಾಲಾಗುವಂತೆ ಸೋಕಾಲ್ಡ್ ನಾಯಕರು ನೋಡಿಕೊಳ್ಳುತ್ತಾರೆ. ನಂತರದ ದಿನಗಳಲ್ಲಿ ನಿಮ್ಮ ಮತಗಳಿಂದ ಗೆದ್ದ ಜನಪ್ರತಿನಿಧಿಗಳು ನಿಮ್ಮನ್ನು ಮರೆತೇ ಬಿಡುತ್ತಾರೆ ಎಂದು ಹೇಳಿದರು.
ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಯಾವುದೇ ರಾಜಕಾರಣಿಗಳ ಆಸೆ ಆಕಾಂಕ್ಷೆಗಳಿಗೆ ಬಲಿಯಾಗದೆ ನಿರ್ಭೀತಿಯಿಂದ ಕಾರ್ಮಿಕರ ಹಕ್ಕುಗಳನ್ನು ಅರ್ಹರಿಗೆ ತಲುಪಿಸಲು ಎಲ್ಲಾ ರೀತಿಯಲ್ಲಿ ನಮ್ಮ ಕಾರ್ಯಕರ್ತರು ಕಟಿಬದ್ದರಾಗಿದ್ದಾರೆ. ಒಂದು ವೇಳೆ ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಕಾರ್ಮಿಕರಿಗೆ ಸರಿಯಾಗಿ ಸ್ಪಂದಿಸದೇ ಹೋದಲ್ಲಿ ಕಾನೂನಾತ್ಮಕ ಹೋರಾಟಕ್ಕೂ SDTU ಕಾರ್ಮಿಕರ ಜೊತೆ ಕೈ ಜೋಡಿಸಲಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಎಲ್ಲಾ ವರ್ಗದ ಕಾರ್ಮಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಯೋಜನೆಗಳನ್ನು ರೂಪಿಸಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.
ಹಲವಾರು ಮಹಿಳಾ ಕಾರ್ಮಿಕರು SDTU ಸದಸ್ಯತ್ವ ಪಡೆದಿದ್ದು ,ಚಿತ್ರದುರ್ಗ SDTU ಜಿಲ್ಲಾದ್ಯಕ್ಷ ಮುಸ್ತಾಕ್ ಅಹ್ಮದ್ ನೂತನವಾಗಿ ಆಯ್ಕೆಯಾದ ಪಧಾದಿಕಾರಿಗಳ ಹೆಸರನ್ನು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ SDTU ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಝಾಕಿರ್ ಉಳ್ಳಾಲ ಮಾತಾಡಿ ಪ್ರಸಕ್ತ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ಅಂಜುಮನ್ ಸಂಸ್ಥೆಯ ಅದ್ಯಕ್ಷರಾದ ಝಿಕ್ರಿಯಾ ಅವರನ್ನು ಸನ್ಮಾನಿಸಲಾಯಿತು.
SDTU ಚಿತ್ರದುರ್ಗ ಜಿಲ್ಲಾ ಉಪಾಧ್ಯಕ್ಷ ಯೂಸುಫ್ ಖಾನ್ ಸದಸ್ಯರಾದ ಸಾದಿಕ್,ವಸೀಮ್, ಸೀಮಾ ಬಾನು,ಅಫ್ರಿನಾ ಬಾನು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.