ಚಿತ್ರದುರ್ಗ: ನಾಯಿ ಕಚ್ಚಿ 10 ವರ್ಷದ ಬಾಲಕ ಸಾವು

Prasthutha|

ಚಿತ್ರದುರ್ಗ: ಜಿಲ್ಲೆಯ ಮೆದೇಹಳ್ಳಿಯಲ್ಲಿ ನಾಯಿ ಕಚ್ಚಿ ಹತ್ತು ವರ್ಷದ ಬಾಲಕ ಸಾವೀಗೀಡಾದ ಆಘಾತಕಾರಿ ಘಟನೆ ನಡೆದಿದೆ.

- Advertisement -

ಹತ್ತು ವರ್ಷದ ತರುಣ್‌ಗೆ 15 ದಿನಗಳ ಹಿಂದೆ ನಾಯಿ ಕಡಿದಿತ್ತು. ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ತರುಣ್ ಮೃತಪಟ್ಟಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲ ದಿನಗಳ ಹಿಂದೆ ಕುಷ್ಟಗಿಯಲ್ಲೂ ನಾಯಿ ದಾಳಿಗೆ ಹಲವರು ಗಾಯಗೊಂಡಿದ್ದ ಘಟನೆ ನಡೆದಿತ್ತು.



Join Whatsapp