ಸ್ಪರ್ಧಿಸಿದ ಅಷ್ಟೂ ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ ಚಿರಾಗ್ ಪಾಸ್ವಾನ್ ಪಕ್ಷ

Prasthutha|

ಲೋಕಸಭಾ ಚುನಾವಣೆಯಲ್ಲಿ ಎಲ್​ ಜೆಪಿಯಿಂದ ಸ್ಪರ್ಧಿಸಿದ್ದ ಎಲ್ಲಾ ಕ್ಷೇತ್ರಗಳಲ್ಲೂ ಜಯಭೇರಿ ಬಾರಿಸಿದೆ. ಇದರಿಂದಾಗಿ ಚಿರಾಗ್ ಪಾಸ್ವಾನ್ ಅವರು ರಾಮ್​ ವಿಲಾಸ್ ಪಾಸ್ವಾನ್ ಅವರ ನೈಜ ಉತ್ತರಾಧಿಕಾರಿ ಎಂಬುದು ಸಾಬೀತಾದಂತಾಗಿದೆ. ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದೆ, ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದಿದ್ದರೂ ಎನ್​ಡಿಎ ಬಹುಮತದ ಗಡಿ ದಾಟಿದೆ.

- Advertisement -

2019ರ ಚುನಾವಣೆಯಲ್ಲಿ ಕೂಡಾ ರಾಮ್​ವಿಲಾಸ್ ಪಾಸ್ವಾನ್ ನೇತೃತ್ವದಲ್ಲಿ ಎಲ್​ಜೆಪಿ, ಎನ್​ಡಿಎ ಸೀಟು ಹೊಂದಾಣಿಕೆಯಡಿ ಹಂಚಿಕೆಯಾಗಿದ್ದ ಎಲ್ಲಾ ಆರು ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಎಲ್​ಜೆಪಿ ಹಾಜಿಪುರ, ವೈಶಾಲಿ, ಸಮಷ್ಟಿಪುರ, ಖಗಾರಿಯಾ ಹಾಗೂ ಜಮುಯಿ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

ಬಿಹಾರದಲ್ಲಿ ಎನ್​ಡಿಎ 40ರಲ್ಲಿ 30 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ 12 ಸ್ಥಾನಗಳು, ಜನತಾದಳ ಯುನೈಟೆಡ್ 12 ಸ್ಥಾನಗಳು, ಲೋಕ ಜನಶಕ್ತಿ ಪಕ್ಷ(ರಾಮ್​ವಿಲಾಸ್ ಪಾಸ್ವಾನ್) 5 ಸ್ಥಾನಗಳನ್ನು ಪಡೆದಿದೆ ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ 1 ಸ್ಥಾನವನ್ನು ಪಡೆದುಕೊಂಡಿದೆ.



Join Whatsapp