ನವದೆಹಲಿ: ಭದ್ರತಾ ಸಲಹೆಗಾರ ಅಜಿವ್ ದೋವೆಲ್ ಅವರನ್ನು ಭೇಟಿಯಾದ ಚೀನಾ ವಿದೇಶಾಂಗ ಸಚಿವ

Prasthutha|

ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಅವರನ್ನು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು ದೆಹಲಿಯಲ್ಲಿ ಭೇಟಿಯಾಗಿ, ಪೂರ್ವ ಲಡಾಖ್ ಮತ್ತು ಉಕ್ರೇನ್ ಬಿಕ್ಕಟ್ಟಿನ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

ಪೂರ್ವ ಲಡಾನ್ ನ ಮಿಲಿಟರಿ ಬಿಕ್ಕಟ್ಟಿನಿಂದಾಗಿ ಉಭಯ ರಾಷ್ಟ್ರಗಳಲ್ಲಿ ಉಂಟಾಗಿರುವ ವೈಮನಸ್ಸನ್ನು ಶಮನಗೊಳಿಸಿ ಬಾಂಧವ್ಯದಲ್ಲಿ ಸುಧಾರಣೆ ಸಾಧಿಸುವ ಸಲುವಾಗಿ ಈ ಮಾತುಕತೆ ಮಹತ್ವ ಪಡೆದಿದೆ. ಅಜಿತ್ ದೋವೆಲ್ ಅವರ ಭೇಟಿಯ ಬಳಿಕ ವಾಂಗ್ ಅವರು ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಅವರನ್ನೂ ಭೇಟಿಯಾಗಿದ್ದಾರೆ.

ಉಭಯ ರಾಷ್ಟ್ರಗಳ ನಡುವಿನ ಗಡಿಯ ಕುರಿತು ಚರ್ಚಿಸಲು ವಿಶೇಷ ಪ್ರತಿನಿಧಿಗಳಾಗಿ ಸೇವೆಗೈಯುವುದರಿಂದ ವಾಂಗ್ ಮತ್ತು ದೋವಲ್ ಅವರು ಪ್ರಮುಖವಾಗಿ ಗಡಿ ವಿವಾದದ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

- Advertisement -



Join Whatsapp