ಚೀನಾದ ಉಯಿಘುರ್ ಮುಸ್ಲಿಮರ ಶಿಬಿರಗಳಲ್ಲಿ ಮಹಿಳೆಯರ ವ್ಯವಸ್ಥಿತ ಅತ್ಯಾಚಾರ, ಹಿಂಸೆ, ದೌರ್ಜನ್ಯ : ವರದಿ

Prasthutha|

ನವದೆಹಲಿ : ಚೀನಾದ ಉಯಿಘುರ್ ಕ್ಯಾಂಪ್ ಗಳಲ್ಲಿ ಮುಸ್ಲಿಮರ ಮೇಲೆ ವ್ಯಾಪಕ ದೌರ್ಜನ್ಯಗಳಾಗುತ್ತಿರುವ ಬಗ್ಗೆ ಬಿಬಿಸಿ ವರದಿಯೊಂದು ತಿಳಿಸಿದೆ. ಉಯಿಘುರ್ ಮತ್ತು ಇತರ ಮುಸ್ಲಿಮರನ್ನು ವಶಕ್ಕೆ ತೆಗೆದುಕೊಂಡು, ‘ಪುನರ್ ಶಿಕ್ಷಣ ಶಿಬಿರಗಳಲ್ಲಿ ಇರಿಸಲಾಗಿದ್ದು, ಇಲ್ಲಿ ಭಯಾನಕ ದೌರ್ಜನ್ಯಗಳು ನಡೆದಿವೆ.

- Advertisement -

ಮಹಿಳೆಯರ ಮೇಲೆ ವ್ಯವಸ್ಥಿತ ಅತ್ಯಾಚಾರ, ಹಿಂಸೆ, ಕಿರುಕುಳಗಳನ್ನು ನೀಡಲಾಗುತ್ತಿದೆ. ಮಹಿಳೆಯರ ಬಗ್ಗೆ ಮಾತನಾಡುವವರನ್ನು ಮಾಸ್ಕ್ ಧರಿಸಿದ ವ್ಯಕ್ತಿಗಳು ಎತ್ತಿಕೊಂಡು ಹೋಗುತ್ತಾರೆ ಎನ್ನಲಾಗಿದೆ.  

ಕ್ಸಿನ್ ಜಿಯಾಂಗ್ ನ ಉಯಿಘುರ್ ಮತ್ತು ಇತರ ಮುಸ್ಲಿಮರ ಶಿಬಿರಗಳಲ್ಲಿ ಮಹಿಳೆಯರ ವ್ಯವಸ್ಥಿತ ಅತ್ಯಾಚಾರ, ಲೈಂಗಿಕ ಕಿರುಕುಳದ ವರದಿಗಳಿಂದ ನಾವು ತುಂಬಾ ವಿಚಲಿತರಾಗಿದ್ದೇವೆ. ಈ ದೌರ್ಜನ್ಯಗಳು ಆಘಾತಕಾರಿಯಾದುದು ಮತ್ತು ಗಂಭಿರ ಪರಿಣಾಮಕಾರಿಯಾದುದು ಎಂದು ವರದಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ವಿದೇಶಾಂಗ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

- Advertisement -

ಒಂದು ಖಾಸಗಿ ಅಂದಾಜಿನ ಪ್ರಕಾರ ಒಂದು ಮಿಲಿಯನ್ ಗಿಂತಲೂ ಹೆಚ್ಚು ಪುರುಷ, ಮಹಿಳೆಯರು ಈ ಶಿಬಿರಗಳಲ್ಲಿದ್ದಾರೆ. ಚೀನಾ ಮಾತ್ರ ಇವುಗಳನ್ನು ‘ಪುನರ್ ಶಿಕ್ಷಣ ಕೇಂದ್ರ’ಗಳು ಎನ್ನುತ್ತಿದೆ,

ಕುರ್ ಆನ್ ಹೊಂದಿದುದಕ್ಕೆ, ಹಂದಿ ಮಾಂಸ ತಿನ್ನದಿರುವುದಕ್ಕೂ ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾನವ ಹಕ್ಕು ಹೋರಾಟಗಾರರು ಆಪಾದಿಸಿದ್ದಾರೆ. ಆದರೆ, ಚೀನಾ ಎಲ್ಲಾ ಆರೋಪಗಳನ್ನೂ ತಳ್ಳಿ ಹಾಕಿದೆ.  

Join Whatsapp