ಚೀನಾ ಜನಸಂಖ್ಯೆ ಎರಡನೇ ವರ್ಷವೂ ಇಳಿಕೆ

Prasthutha|

ಬೀಜಿಂಗ್‌: ಸತತ ಎರಡನೇ ವರ್ಷವೂ ಚೀನಾದ ಜನಸಂಖ್ಯೆಯು ಇಳಿಕೆ ಕಂಡಿದೆ. 2023ರಲ್ಲಿ ಚೀನಾದ ಜನಸಂಖ್ಯೆ 140.9 ಕೋಟಿಯಷ್ಟಾಗಿದ್ದು, ಇದು ಹಿಂದಿನ ವರ್ಷಕ್ಕಿಂತ 20.80 ಲಕ್ಷದಷ್ಟು ಇಳಿಕೆ ಎಂದು ಚೀನಾದ ರಾಷ್ಟ್ರೀಯ ಅಂಕಿ ಅಂಶಗಳ ಬ್ಯೂರೊ ಪ್ರಕಟಿಸಿದೆ. ಆರು ದಶಕಗಳಲ್ಲಿ 2022ರಲ್ಲಿ ‌ಮೊದಲ ಬಾರಿಗೆ ಚೀನಾದ ಜನಸಂಖ್ಯೆ ಕುಸಿತ ಕಂಡಿತ್ತು.

- Advertisement -

2022ರಲ್ಲಿ ಸಾವಿರಕ್ಕೆ 6.77ರಷ್ಟಿದ್ದ ಜನನ ಪ್ರಮಾಣವು, 2023ರಲ್ಲಿ 6.39ಕ್ಕೆ ಕುಸಿದಿದೆ ಎಂಬುದು ಎನ್‌ಬಿಎಸ್‌ ಅಂಕಿ ಅಂಶಗಳು ತಿಳಿಸುತ್ತದೆ.

.ಕಳೆದ ವರ್ಷ 90.2 ಲಕ್ಷ ಶಿಶುಗಳು ಚೀನಾದಲ್ಲಿ ಜನಿಸಿದ್ದರೆ, 2022ರಲ್ಲಿ 95.6 ಲಕ್ಷ ಶಿಶುಗಳ ಜನಿಸಿದ್ದವು. ಅಂದರೆ ಜನನ ಪ್ರಮಾಣ ಶೇ 5.6ರಷ್ಟು ಕಡಿಮೆಯಾಗಿದೆ. 1949ರಿಂದೀಚೆಗೆ ಇದೇ ಮೊದಲ ಬಾರಿಗೆ ಜನನ ಪ್ರಮಾಣ ದೊಡ್ಡ ಪ್ರಮಾಣದಲ್ಲಿ ಇಳಿಕೆ ದಾಖಲಾಗಿದೆ. 2022ರಲ್ಲಿ ಸಾವಿರಕ್ಕೆ 6.77ರಷ್ಟಿದ್ದ ಜನನ ಪ್ರಮಾಣವು, 2023ರಲ್ಲಿ 6.39ಕ್ಕೆ ಕುಸಿದಿದೆ ಎಂಬುದು ಎನ್‌ಬಿಎಸ್‌ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

- Advertisement -

ಮುಂದಿನ ವರ್ಷಗಳಲ್ಲಿ ಚೀನಾದ ಒಟ್ಟಾರೆ ಜನಸಂಖ್ಯೆಯ ಪ್ರಮಾಣವು ಇನ್ನಷ್ಟು ಕುಸಿತ ಕಾಣಲಿದೆ ಎಂದು ಫುಡಾನ್‌ ವಿಶ್ವವಿದ್ಯಾಲಯದ ಜನಸಂಖ್ಯೆ ಮತ್ತು ಅಭಿವೃದ್ಧಿ ನೀತಿ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಪೆಂಗ್‌ ಕ್ಸಿಝೆ ಹೇಳಿದ್ದಾರೆ.

ಜನಸಂಖ್ಯೆಯ ಇಳಿಕೆ ಪ್ರಮಾಣವನ್ನು ಗುರುತಿಸಿದ್ದ ಚೀನಾವು 2021ರಲ್ಲಿ ಜನಸಂಖ್ಯೆ ನಿಯಂತ್ರಣ ನೀತಿಯಲ್ಲಿ ಕೆಲ ಸುಧಾರಣೆಗಳನ್ನು ತಂದಿತು. ಮೂರು ಮಕ್ಕಳನ್ನು ಹೊಂದಲು ಅವಕಾಶವನ್ನು ಕಲ್ಪಿಸುವ ನೀತಿಯನ್ನೂ ಅದು ಜಾರಿಗೊಳಿಸಿತು. ದೇಶದ ಹಲವು ನಗರ, ಪ್ರಾಂತ್ಯ ಮತ್ತು ಪ್ರದೇಶಗಳಲ್ಲಿ ಎರಡು ಅಥವಾ ಮೂರನೇ ಮಗುವನ್ನು ಹೊಂದುವ ಕುಟುಂಬಗಳಿಗೆ ವಿವಿಧ ರೀತಿಯ ಸಬ್ಸಿಡಿಗಳನ್ನು ಒದಗಿಸುವಂತಹ ಪ್ರೋತ್ಸಾಹದಾಯಕ ನೀತಿಗಳನ್ನು ಘೋಷಿಸಿತ್ತು.

Join Whatsapp